ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ ಚಾರ್ಲಿ ಬೆಡಗಿ: ಸಂಗೀತಾ ಶೃಂಗೇರಿ ಹೊಸ ಲುಕ್ ವೈರಲ್

ಸಂಗೀತಾ ಶೃಂಗೇರಿ (Sangeetha Sringeri) 777 ಚಾರ್ಲಿ(777 Charlie), ಲಕ್ಕಿ ಮ್ಯಾನ್ (Luckyman) ಸಿನಿಮಾಗಳಲ್ಲಿ ಮಿಂಚಿದ ನಟಿ ಇವರು. ಅಂದ ಮತ್ತು ಅಭಿನಯದ ಮೂಲಕ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದ ನಟಿ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಈ ನಟಿ ಇದೀಗ ತಮ್ಮ ಹೊಸ ಫೋಟೋಗಳ ಮೂಲಕ ಸಖತ್ ಸದ್ದು ಮಾಡಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.‌

ನಟಿ ಸ‌ಂಗೀತಾ ಭರ್ಜರಿ ವರ್ಕ್ ಔಟ್ ಮಾಡಿ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಪೋಸ್ ನೀಡಿದ್ದು, ಇದನ್ನು ನೋಡಿ ಅಭಿಮಾನಿಗಳು ಮತ್ತು ನೆಟ್ಟಿಗರು ದಂಗಾಗಿದ್ದಾರೆ. ಬಳುಕುವ ಬಳ್ಳಿಯಂತೆ ತೆಳ್ಳಗಾದ ನಟಿಯ ಆಕರ್ಷಕ ಲುಕ್ ಎಲ್ಲರನ್ನೂ ಸೆಳೆಯುತ್ತಿದೆ. ಜಿಮ್ ಧಿರಿಸಿನಲ್ಲಿ ನಟಿ ಫಿಟ್ ಆಗಿ ಕಂಡಿದ್ದಾರೆ. ತಮ್ಮ ಪೋಸ್ಟ್ ಜೊತೆಗೆ ಇಂತಹುದೊಂದು ಬದಲಾವಣೆ ಬಗ್ಗೆ ಒಂದಷ್ಟು ವಿಷಯ ತಿಳಿಸುತ್ತಾ, ನಟಿ ತಮ್ಮ ಕನಸಿನ ಲುಕ್ ಕುರಿತಂತೆ ನಟಿಯು ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿಯು, ಕನಸುಗಳು ನನಸಾಗುತ್ತವೆ, ನಾನು ಬಯಸಿದ ರೀತಿಯಲ್ಲಿ ನನ್ನ ಪ್ಯಾಕ್‌ಗಳನ್ನು ಪಡೆದುಕೊಂಡಿದ್ದೇನೆ ಎಂದು ಹೇಳುತ್ತಾ, ನಾನು ಎರಡನೇ ಬಾರಿಗೆ ಟ್ರಾನ್ಸ್ಫಾರ್ಮ್ ಆಗಿದ್ದು, ಇದು ದೈಹಿಕವಾಗಿ ಮಾತ್ರವೇ ಅಲ್ಲ, ಆರೋಗ್ಯದ ವಿಚಾರದಲ್ಲೂ ಸಹಾ ಆಗಿದೆ ಎಂದಿದ್ದಾರೆ. ಅಲ್ಲದೇ ತಮಗಿದ್ದಂತಹ ಹಾರ್ಮೋನಲ್ ಇಂಬ್ಯಾಲನ್ಸ್ ಈಗ ಸರಿಯಾಗಿದೆ ಎಂದು ಹೇಳಿದ್ದಾರೆ.

ದೇಹವನ್ನು ದಂಡಿಸಲು 9 ವಾರಗಳ ತೀವ್ರ ತರಬೇತಿ ಪಡೆದಿದ್ದು ಅದರ ಜೊತೆಗೆ ಪ್ರತಿದಿನ 26 ಕಿ.ಮೀ ಪ್ರಯಾಣ ಮಾಡುತ್ತಿದ್ದೆ ಎಂದಿದ್ದಾರೆ, ಈ ಅವಧಿಯಲ್ಲಿ ತನಗೆ ನಿರಂತರ ಟ್ರೈನ್ ಮಾಡಿದ ಸವೀನ್ ಸುಚಿತ್ರಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದು, ನಟಿಯ ಪೋಸ್ಟ್ ವೈರಲ್ ಆಗಿದ್ದು, ಅವರ ಅಭಿಮಾನಿಗಳು ನಟಿಯ ಹೊಸ ಲುಕ್ ಅನ್ನು ಹಾಡಿ ಹೊಗಳುತ್ತಿದ್ದಾರೆ.

Related posts

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

This website uses cookies to improve your experience. We'll assume you're ok with this, but you can opt-out if you wish. Read More