ರಾಜ್ಯದಲ್ಲಿ ಕಾಂಗ್ರೆಸ್ ಸರ್ಜಾರವು ನೀಡಿರುವ ಗ್ಯಾರಂಟಿ ಹೊಡೆತದ ಕಾರಣದಿಂದಾಗಿ ಈಗ ಕಾಂಗ್ರೆಸ್ ಸರ್ಕಾರ (Karnataka Govt) ಶಾಲಾ ಮಕ್ಕಳ ಹಣಕ್ಕೆ ಕತ್ತರಿ ಹಾಕಿದೆ ಎನ್ನುವು ಸುದ್ದಿಯೊಂದು ಈಗ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದೆ. ಹೌದು, ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಸರ್ಕಾರ ನೀಡುವ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿ ಆದೇಶ ಹೊರಡಿಸಿದೆ ಎನ್ನುವ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಸರ್ಕಾರವು ನೀಡಬೇಕಾಗಿದ್ದ ಅನುದಾನದಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿಗಳ ಹಣವನ್ನು ಕಡಿತ ಮಾಡಿ, ಶೂ, ಸಾಕ್ಸ್ ಖರೀದಿಗೆ ಆದೇಶವನ್ನು ಹೊರಡಿಸಿದೆ. ಬಿಜೆಪಿ ಸರ್ಕಾರವು 2022-23ನೇ ಸಾಲಿನಲ್ಲಿ 1 ರಿಂದ 10 ನೇ ತರಗತಿ ಮಕ್ಕಳಿಗೆ 1 ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿಗೆ ಒಟ್ಟು 132 ಕೋಟಿ ಹಣ ಬಿಡುಗಡೆ ಮಾಡಿತ್ತು. 2023-24 ನೇ ಸಾಲಿಗೆ 125 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದನ್ನು ಗಮನಿಸಿದಾಗ 7 ಕೋಟಿ ಹಣ ಕಡಿತ ಮಾಡಿರುವುದು ತಿಳಿಯುತ್ತದೆ.
ಬಿಜೆಪಿ ಅವಧಿಯಲ್ಲಿ ಶೂಗೆ ನಿಗದಿ ಮಾಡಿದ್ದ ಅದೇ ದರವನ್ನು ಈ ವರ್ಷವೂ ಕೂಡಾ ಸರ್ಕಾರ ನಿಗಧಿ ಮಾಡಿದೆ. ಕಳೆದ ವರ್ಷದ ರೇಟ್ ನಲ್ಲಿಯೇ ಶೂ, ಸಾಕ್ಸ್ ಖರೀದಿ ಮಾಡುವಂತೆ ಶಾಲೆಗಳಿಗೆ ಸೂಚನೆಯನ್ನು ನೀಡಲಾಗಿದೆ. 2019-20 ನೇ ಸಾಲಿನಲ್ಲಿ ಇದ್ದ ದರದಲ್ಲೇ 2023-24ವನೇ ಸಾಲಿಗೂ ಶೂ ಖರೀದಿಗೆ ಸರ್ಕಾರ ಆದೇಶವನ್ನು ನೀಡಿದೆ. ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟದ ಶೂ ಕೊಡಬೇಕೆಂದು ಎಲ್ಲಾ ಶಾಖೆಗಳಿಗೆ ಸರ್ಕಾರವು ಸೂಚನೆಯನ್ನು ನೀಡಲಾಗಿದೆ
ಈಗ ಸರ್ಕಾರವು ಅನುದಾನ ಕಡಿತ ಮಾಡಿರುವ ವೇಳೆಯಲ್ಲೇ, ನಿಗದಿ ಮಾಡಿರುವ ಹಣದಲ್ಲಿ ಹೆಸರಾಂತ ಕಂಪನಿಗಳ ಶೂ ನೀಡಬೇಕಂದು ಸಹಾ ಸೂಚನೆಯನ್ನು ನೀಡಿದೆ. ಅಲ್ಲದೇ ಒಂದು ವೇಳೆ ಶೂ ಖರೀದಿಗೆ ಹಣ ಸಾಕಾಗದೇ ಹೋದರೆ ಏನು ಮಾಡಬೇಕೆಂಬುದರ ಬಗ್ಗೆಯೂ ಸಹಾ ಸರ್ಕಾರವು ಸೂಚನೆಯನ್ನು ನೀಡಿದೆ ಎನ್ನಲಾಗಿದೆ. ಇದರಿಂದಾಗಿ ಈಗ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ದಾನಿಗಳ ಮೊರೆ ಹೋಗಬೇಕಾಗಿದೆ.