ತಲೈವಾ ರಜನೀಕಾಂತ್ ( Rajanikant ) ನಟನೆಯ ಹೊಸ ಸಿನಿಮಾ ಜೈಲರ್ ಮೇಲೆ ಪ್ರಸ್ತುತ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಿನಿಮಾದ ಒಂದು ಹಾಡು ಬಿಡುಗಡೆ ನಂತರ ಸಖತ್ ಹವಾ ಕ್ರಿಯೆಟ್ ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಈ ಹಾಡಿಗೆ ಬಹಳಷ್ಟು ಜನ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಹಾ ಈ ಹಾಡಿಗೆ ಸ್ಟೆಪ್ ಹಾಕಿ ಗಮನ ಸೆಳೆಯುತ್ತಿದ್ದಾರೆ.
ಹಾಡಿಂದಲೇ ಸಖತ್ ಕ್ರೇಜ್ ಸೃಷ್ಟಿಸಿರುವ ಜೈಲರ್ ಸಿನಿಮಾದ ( Jailer Movie ) ಬಿಡುಗಡೆಗಾಗಿ ಎಲ್ಲೆಡೆ ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾ 250 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಸ್ಯಾಂಡಲ್ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ( Shiva Rajkumar ) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸಿನಿ ಪ್ರಿಯರು ಮಾತ್ರವಲ್ಲದೇ ಚಿತ್ರತಂಡ ಮತ್ತು ಖುದ್ದು ತಲೈವಾ ಸಿನಿಮಾ ಬಿಡುಗಡಗೆ ಕಾಯುತ್ತಿದ್ದಾರೆ. ರಜನೀಕಾಂತ್ ಅವರು ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಕ್ಕೆ ಕಾರಣವೊಂದಿದೆ.
ಹೌದು, ಸಿನಿಮಾ ಬಿಡುಗಡೆ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾದಿಂದ ಸದ್ಯದ ಮಟ್ಟಿಗೆ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ರಜನೀಕಾಂತ್ ಅವರು ತಮ್ಮ ಪ್ರತಿ ಸಿನಿಮಾದ ನಂತರವೂ ಆಧ್ಯಾತ್ಮಿಕ ವಿರಾಮ ತೆದುಕೊಂಡು ಮನಸ್ಸಿನ ಶಾಂತಿಗಾಗಿ ಉತ್ತಮ ಪರಿಸರದತ್ತ ಮುಖ ಮಾಡುತ್ತಾರೆ. ಈಗ ಜೈಲರ್ ಬಿಡುಗಡೆ ನಂತರವೂ ಅವರು ಅಂತಹುದೊಂದು ಬ್ರೇಕ್ ಪಡೆಯುವ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ.