ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಖ್ಯಾತಿಯ ಸ್ಟಾರ್ ನಟಿ ರಾಧಿಕಾ ಪಂಡಿತ್ ಅವರು ಜುಲೈ 18 ಕ್ಕೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಬರೋಬ್ಬರಿ 15 ವರ್ಷಗಳನ್ನು ಪೂರೈಸಿದ್ದು ಈ ವೇಳೆ ನಟಿ ತಾವು ಐದು ವರ್ಷಗಳ ಹಿಂದೆ ಮಾಡಿದ್ದ ಪೋಸ್ಟ್ ಅನ್ನು ಮತ್ತೊಮ್ಮೆ ಹಂಚಿಕೊಂಡು ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ರಾಧಿಕಾ ಪಂಡಿತ್ ತಮ್ಮ ಸಿನಿ ಜರ್ನಿಯನ್ನು ಸೀರಿಯಲ್ ಮೂಲಕ ಆರಂಭಿಸಿ ಅನಂತರ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ನೀಡಿದರು. ಆ ಸಿನಿಮಾ ಬಂದು ಮೊನ್ನೆಗೆ ಹದಿನೈದು ವರ್ಷಗಳನ್ನು ಪೂರೈಸಿದೆ.
ಆ ನೆನಪಿನಲ್ಲಿ ನಟಿ ತಮ್ಮ ಹಳೆಯ ಪೋಸ್ಟ್ ನಲ್ಲಿ ಬರೆದಿದ್ದನ್ನು ಸ್ಮರಿಸಿದ್ದಾರೆ.. ಜುಲೈ 18, 2008.. “ರಾಧಿಕಾ ಪಂಡಿತ್” ನಿಮಗೆಲ್ಲ ಪರಿಚಯವಾದ ದಿನ, ಅವರು ಸಿನಿಮಾ ಜಗತ್ತಿಗೆ ಪರಿಚಯವಾದ ದಿನ. ನಟಿಯ ಜೀವನವು ಅಲ್ಪ ಕಾಲೀನ. ಆದರೆ 10 ವರ್ಷಗಳು ದೀರ್ಘವಾದುದು ಎನಿಸುತ್ತದೆ. 10 ವರ್ಷಗಳು ಸಿನಿಮಾದಲ್ಲಿ ಇರುವುದು ಮಾತ್ರವಲ್ಲ, ಆ ಸ್ಥಾನ ಉಳಿಸಿಕೊಳ್ಳಲು, ನನ್ನ ಸಾಧನೆ ಏನು ಎಂದು ನೀವು ಕೇಳುತ್ತೀರಿ? ಅದು ನೀವೇ..
ನನ್ನನ್ನು ಪ್ರೀತಿಸುವ, ನನ್ನನ್ನು ಗೌರವಿಸುವ ನನ್ನ ಚಿತ್ರರಂಗದ ಎಲ್ಲರೂ ಈಗಲೂ ನನ್ನ ಜೊತೆ ಇದ್ದಾರೆ. ಇದೆಲ್ಲವೂ ಸುಲಭವಾಗಿ ದಕ್ಕುವುದಿಲ್ಲ, ಇದಕ್ಕೆ ನಿಮ್ಮ ಸುತ್ತಮುತ್ತಲಿನ ಜನರಿಂದ ಸಾಕಷ್ಟು ನೆರವು ಬೇಕು. ಮೊದಲನೆಯದಾಗಿ ನನ್ನ ಕುಟುಂಬ.. ಈ ಪ್ರಯಾಣ ಉದ್ದಕ್ಕೂ ನನ್ನನ್ನು ಬೆಂಬಲಿಸಿದ, ಮಾರ್ಗದರ್ಶನ ನೀಡಿದ ಅವರು ನನ್ನನ್ನು ನಕಾರಾತ್ಮಕತೆಯಿಂದ ಕಾಪಾಡುವಲ್ಲಿ ಎಂದಿಗೂ ವಿಫಲರಾಗಲಿಲ್ಲ.
ನನ್ನ ಶೂಟಿಂಗ್ ನ ಪ್ರತಿ ದಿನವೂ ನನ್ನ ಜೊತೆಗಿರುವ ನನ್ನ ತಾಯಿ.. ನನ್ನ ಸಹಾಯಕ ಶಂಕರ್ ಕೂಡ, ಅವರು 10 ವರ್ಷಗಳಿಂದ ನನಗೆ ಸಹಾಯ ಮಾಡುತ್ತಿದ್ದಾರೆ. ನನ್ನ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಸಾಮರ್ಥ್ಯವನ್ನು ನಂಬಿ ನನಗೆ ಕೆಲಸ ಕೊಟ್ಟಿದ್ದಾರೆ. ನನ್ನ ತಂತ್ರಜ್ಞರು ನನಗೆ ಕೆಲಸ ಮಾಡಲು ಸುಲಭ ಮತ್ತು ಆರಾಮದಾಯಕವಾಗಿಸಿದ್ದಾರೆ.
ಕನಸಿನೊಂದಿಗೆ ಈ ಉದ್ಯಮಕ್ಕೆ ಬಂದ ಎಲ್ಲಾ ಸುಂದರ ಹೊಸ ಹುಡುಗಿಯರಿಗೆ.. ನಾನು ಅವರಿಗೆ ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ.. ನಿಮ್ಮ ಕಲೆಯಲ್ಲಿ ಉತ್ತಮವಾಗಿದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ತಮ ಮಾನವರಾಗಿರುವುದು ಮುಖ್ಯ, ಅಂತಿಮವಾಗಿ ಅಭಿನಂದನೆಗಳನ್ನು ಸ್ವೀಕರಿಸಿ “ನೀವು ನನ್ನ ಸ್ಫೂರ್ತಿ”
ಅಂತಿಮವಾಗಿ, ನನ್ನ ಎಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಇದನ್ನು ವಿದಾಯ ಭಾಷಣ ಎಂದು ತೆಗೆದುಕೊಳ್ಳಬೇಡಿ, ‘ಸಿನಿಮಾ ಇನ್ನ ಬಾಕಿ ಇದೆ’ ಎಂದು ಹೇಳಿದ್ದರು. ಆದರೆ ಹಾಗೆ ಹೇಳಿದ ನಟಿ ಇದುವರೆಗೂ ಯಾವುದೇ ಹೊಸ ಸಿನಿಮಾ ಮಾಡುತ್ತೇನೆ ಎನ್ನುವ ಸುಳಿವನ್ನು ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಇನ್ನೂ ನಿರೀಕ್ಷೆ ಮಾಡುತ್ತಲೇ ಇದ್ದಾರೆ.