ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದ ಒಂದು ಹಾಡು ಕಳೆದ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿದೆ. ನಾ ರೆಡಿ ಹಾಡು ನಟ ವಿಜಯ್ ಅವರ ಜನ್ಮದಿನದಂದು ಅಂದರೆ ಜೂನ್ 22 ರಂದು ಬಿಡುಗಡೆ ಆಗಿತ್ತು. ಬಿಡುಗಡೆ ನಂತರ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಅನ್ನು ಸೃಷ್ಟಿಸಿದೆ. ನಟನ ಅಭಿಮಾನಿಗಳು ಖುಷಿಯಿಂದ ಕುಣಿದಿದ್ದಾರೆ.
ವಿಜಯ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಬೇಕೆಂದು ಚಿತ್ರತಂಡ ಈ ಹಾಡನ್ನು ಬಿಡುಗಡೆ ಮಾಡಿತ್ತು. ಆದರೆ ಈಗ ಇದೇ ಹಾಡು ಚಿತ್ರ ತಂಡಕ್ಕೊಂದು ಹೊಸ ಸಂಕಷ್ಟವನ್ನು ತಂದೊಡ್ಡಿದೆ.ಈ ಹಾಡಿನಲ್ಲಿ ನಟ ವಿಜಯ್ ಸಿಗರೇಟ್ ಸೇದುತ್ತಾ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಚೆನ್ನೈನ ಆರ್ ಟಿ ಐ ಕಾರ್ಯಕರ್ತ ಸೆಲ್ವಂ ಈಗ ಸಿನಿಮಾದ ಹಾಡಿನ ಬಗ್ಗೆ ಅಸಮಾಧಾನವನ್ನು ಹೊರ ಹಾಕುತ್ತಾ ಚಿತ್ರ ತಂಡದ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಲಿಯೋ ಸಿನಿಮಾದ ಹಾಡಿನಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಿದ್ದಾರೆ ಎನ್ನುವ ಕಾರಣವನ್ನು ನೀಡಿದ್ದು, ನಟ ವಿಜಯ್ ವಿರುದ್ಧ ಮಾ ದ ಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಹಾಡಿನಲ್ಲಿ ಸಿಗರೇಟ್ ಸೇದುವ ದೃಶ್ಯಗಳಿದ್ದು, ಇದು ಇಂದಿನ ಸಮಾಜಕ್ಕೆ ಹಾನಿಕರ ಎಂಬ ದೂರಿನ ಆಧಾರದ ಮೇಲೆ ನಟ ವಿಜಯ್ ಹಾಗೂ ಚಿತ್ರದ ಘಟಕದ ವಿರುದ್ಧ ಪೊಲೀಸ್ ಕೇಸ್ ಅನ್ನು ದಾಖಲಿಸಲಾಗಿದೆ.