ವಿಷ ಬೇಕಾದ್ರು ಕುಡೀತೀನಿ ಆದ್ರೆ ಪಾಕಿಸ್ತಾನಕ್ಕೆ ಹೋಗಲ್ಲ: ಪ್ರೀತಿಸಿದವನಿಗಾಗಿ ಭಾರತಕ್ಕೆ ಬಂದ ಮಹಿಳೆಯ ಹಠ

ಪಬ್ಜಿ ಮೂಲಕ ಪರಿಚಿತನಾದ ಯುವಕನನ್ನು ಪ್ರೀತಿಸಿ ಆತನೊಂದಿಗೆ ಜೀವನ ನಡೆಸಲು ತನ್ನ ನಾಲ್ಕು ಜನ ಮಕ್ಕಳೊಂದಿಗೆ ಪಾಕಿಸ್ತಾನವನ್ನು ತೊರೆದು ಅಕ್ರಮವಾಗಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಇದೀಗ ತಮ್ಮ ಗೆಳೆಯ ಸಚಿನ್ ಮೀನಾ ಜೊತೆಗಿದ್ದು, ತಾನು ಇಲ್ಲೇ ಬೇಕಾದರೂ ಸಾಯುತ್ತೇನೆ ಹೊರತು ಮರಳಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ‌ ಎಂದು ತೀರ್ಮಾನಿಸಿದ್ದಾರೆ. ನಾಲ್ಕು ಮಕ್ಕಳೊಂದಿಗೆ ದುಬೈಗೆ ಬಂದು ಅಲ್ಲಿಂದ ನೇಪಾಳ ತಲುಪಿದ್ದ ಸೀಮಾಳನ್ನು ಸಚಿನ್ ನೇಪಾಳದ ಮೂಲಕ ಭಾರತಕ್ಕೆ ಕರೆ ತಂದಿದ್ದಾನೆ.

ಅವರನ್ನು ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಇರಿಸಿದ್ದ. ಅನಂತರ ವಿಷಯ ಹೊರಗೆ ಬಂದ ಮೇಲೆ ಅಕ್ರಮವಾಗಿ ದೇಶ ಪ್ರವೇಶಿಸಿದ ಕಾರಣ ಸೀಮಾಳನ್ನು ಮತ್ತು ಆಕೆಗೆ ಆಶ್ರಯ ನೀಡಿದ್ದಕ್ಕೆ ಸಚಿನ್ ಮತ್ತು ಆತನ ತಂದೆಯನ್ನು ಸಹಾ ಬಂಧಿಸಲಾಗಿತ್ತು. ಅನಂತರ ಕೋರ್ಟ್ ನಲ್ಲಿ ಅವರಿಗೆ ಜಾಮೀನು ದೊರೆತು ಅವರು ಈಗ ಹೊರಗೆ ಬಂದಿದ್ದಾರೆ. ಈ ವೇಳೆ ಸೀಮಾ ಬೇಕಾದರೆ ನಾನು ಕತ್ತು ಸೀಳಿಕೊಂಡು ಅಥವಾ ವಿಷ ಕುಡಿದು ಸಾಯುತ್ತೇನೆಯೇ ಹೊರತು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದಿದ್ದಾಳೆ.

ತನ್ನ ಪತಿ ಗುಲಾಂ ಹೈದರ್ ಸೌದಿ ಅರೇಬಿಯಾದಲ್ಲಿ ಇದ್ದು, ಆತ 2020 ರಿಂದ ತನ್ನ ಜೀವನದಿಂದ ದೂರವೇ ಇದ್ದಾನೆ. ಆತ ಬಹಳ ಕ್ರೂರಿಯಾಗಿದ್ದು, ಹಿಂಸೆ ನೀಡುತ್ತಿದ್ದ ಎಂದು ಸೀಮಾ ಹೇಳಿದ್ದು, ತಾನು ಪಾಕಿಸ್ತಾನಕ್ಕೆ ಹಿಂತಿರುಗಿದರೆ ತನ್ನನ್ನು ಕೊಂದೇ ಬಿಡುತ್ತಾರೆ ಎಂದು ಹೇಳಿದ್ದಾಳೆ. ಸಚಿನ್ ಪಬ್ಜಿ ಆಡುವಾಗ 2019 ರಲ್ಲಿ ಪರಿಚಯ ಆದನೆಂದು ಆತನ ಪ್ರೀತಿಗಾಗಿ ಇಂತಹುದೊಂದು ದುಸ್ಸಾಹಸ ಮಾಡಿದ್ದಾಗಿ ಹೇಳಿದ್ದಾಳೆ.

ಅಲ್ಲದೇ ತಾನು ಹಿಂದೂ ಧರ್ಮವನ್ನು ಒಪ್ಪಿದ್ದು, ಸಸ್ಯಾಹಾರಿಯಾಗಿ ಬದಲಾಗಿದ್ದೇನೆ, ತನ್ನ ಕುತ್ತಿಗೆ ಸುತ್ತಲೂ ರಾಧೆ ರಾಧೆ ಪಟ್ಟಿಯನ್ನು ಕಟ್ಟಿಕೊಂಡು, ಜನರಿಗೆ ಕೈ ಜೋಡಿಸಿ ಶುಭಾಶಯ ಹೇಳುವುದು, ಹಿರಿಯರ ಪಾದ ಮುಟ್ಟಿ ಅವರ ಆಶೀರ್ವಾದ ಪಡೆಯುವುದು, ದೇವರ ಪ್ರಾರ್ಥನೆ ಮಾಡುವುದು ಎಲ್ಲವೂ ಈಗ ತನ್ನ ದೈನಂದಿನ ಜೀವನದ ಭಾಗವಾಗಿದೆ ಎಂದು ಸೀಮಾ ತಿಳಿಸಿದ್ದಾಳೆ.

Related posts

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

This website uses cookies to improve your experience. We'll assume you're ok with this, but you can opt-out if you wish. Read More