ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು (Pakistan News) ನಿನ್ನೆ ತನ್ನ ಆದೇಶವೊಂದರಲ್ಲಿ ದೇಶದಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸುವ ಸೂಚನೆಯೊಂದನ್ನು ಹೊರಡಿಸಿದೆ. ಪಾಕ್ ನ ಉನ್ನತ ಶಿಕ್ಷಣ ಆಯೋಗವು ಕ್ಯಾಂಪಸ್ ಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧ ಮಾಡುವುದರ ಜೊತೆಗೆ , ಅಲ್ಲಿನ ವಿದ್ಯಾರ್ಥಿಗಳಿಗೆ ಅಂತಹ ಆಚರಣೆಗಳಿಂದಲೂ ದೂರ ಇರುವಂತೆ ಸಲಹೆಯನ್ನು ನೀಡಿದೆ.
ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ಅಲ್ಲಿನ ವಿದ್ಯಾರ್ಥಿಗಳು ದೇಶದ “ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳನ್ನು” ಅನುಸರಿಸಬೇಕು ಎನ್ನುವ ಕಾರಣಕ್ಕಾಗಿ ಈ ಹಬ್ಬವನ್ನು ಆಚರಣೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಇಂತಹ ಚಟುವಟಿಕೆಗಳು ಅಂದರೆ ಹೋಳಿ ಆಚರಣೆಯಂತಹ ಚಟುವಟಿಕೆಗಳು ಪಾಕ್ ನ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಿಂದ ಸಂಪೂರ್ಣವಾಗಿ ವಿಮುಖವಾದ ಭಾವನೆಯನ್ನು ತೋರಿಸುತ್ತವೆ ಮತ್ತು ದೇಶದ ಇಸ್ಲಾಮಿಕ್ ಗುರುತು ಕಣ್ಮರೆಯಾಗುವುದನ್ನು ತೋರಿಸುತ್ತದೆ ಎಂದಿದೆ.
ವಿಶ್ವವಿದ್ಯಾನಿಲಯದ ವೇದಿಕೆಯೊಂದರ ಸಮಾರಂಭದಲ್ಲಿ ನಡೆದು, ವ್ಯಾಪಕವಾಗಿ ವರದಿಯಾದ/ಪ್ರಚಾರವಾದ ಹೋಳಿ ಆಚರಣೆಯ ಘಟನೆಯು ಆತಂಕವನ್ನು ಉಂಟುಮಾಡಿದೆ ಮತ್ತು ಇದು ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ದೋಷಾರೋಪಣೆ ನೋಟಿಸ್ನಲ್ಲಿ ತಿಳಿಸಿದೆ. ಆದರೂ ಸಾಂಸ್ಕೃತಿಕ, ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆ ಎನ್ನುವುದ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಹಿಷ್ಣುತೆಯ ಸಮಾಜಕ್ಕೆ ಕಾರಣವಾಗುತ್ತದೆ ಎಂದು ನೋಟಿಸ್ ಹೇಳಿದೆ.
ಇದು ಎಲ್ಲಾ ಧರ್ಮಗಳು ಮತ್ತು ಪಂಥಗಳನ್ನು ಆಳವಾಗಿ ಗೌರವಿಸುತ್ತದೆ. ಆದರೆ ಅದೇ ವೇಳೆಯಲ್ಲಿ ವಿದ್ಯಾರ್ಥಿಗಳ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ತಿಳಿದಿರಬೇಕು ಏಕೆಂದರೆ ಅವು ಪರಹಿತಚಿಂತನೆಯ ವಿಮರ್ಶಾತ್ಮಕ ಮಾದರಿಯಿಂದ ದೂರವಿರುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು, ದೇಶದ ಅಸ್ಮಿತೆ ಮತ್ತು ಸಾಮಾಜಿಕ ಮೌಲ್ಯಗಳಿಗೆ ಸ್ಪಷ್ಟವಾಗಿ ಹೊಂದಿಕೆಯಾಗದ ಎಲ್ಲಾ ಚಟುವಟಿಕೆಗಳಿಂದ ವಿವೇಕದಿಂದ ವಿದ್ಯಾರ್ಥಿಗಳು ದೂರವಿರಬೇಕು.