ಆಪ್ಟಿಕಲ್ ಇಲ್ಯೂಷನ್ ಇವು ನಮ್ಮ ಮೆದುಳಿಗೆ ಕೆಲಸವನ್ನು ನೀಡುವ ಚಿತ್ರಗಳು. ಅವು ಸಾಮಾನ್ಯವಾಗಿ ನಮ್ಮ ಗ್ರಹಿಕೆಯೊಡನೆ ಆಡುತ್ತವೆ, ವಾಸ್ತವದ ನಮ್ಮ ತಿಳುವಳಿಕೆಯನ್ನು ಸವಾಲು ಮಾಡುತ್ತವೆ. ಈ ದೃಷ್ಟಿ ಭ್ರಮೆಯ ಚಿತ್ರಗಳು ಬಹಳ ಆಕರ್ಷಕವಾದ ದೃಶ್ಯ ಅನುಭವಗಳನ್ನು ರಚಿಸುವ ಆಕಾರಗಳಾಗಿದ್ದು, ಇದರಲ್ಲಿ ಬಣ್ಣಗಳು ಮತ್ತು ಮಾದರಿಗಳನ್ನು ಬಹಳ ಕುಶಲತೆಯಿಂದ ನಿರ್ವಹಿಸಲಾಗಿರುತ್ತದೆ.
ದೃಷ್ಟಿ ಭ್ರಮೆಯ ಚಿತ್ರಗಳಿಗೆ ನಮ್ಮ ಮೆದುಳು ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇವುಗಳನ್ನು ಮನಶ್ಶಾಸ್ತ್ರಜ್ಞರು ಮತ್ತು ನರವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಈ ಭ್ರಮೆಗಳನ್ನು ಅಧ್ಯಯನ ಮಾಡುವ ಮೂಲಕ, ಸಂಶೋಧಕರು ನಮ್ಮ ದೃಶ್ಯ ವ್ಯವಸ್ಥೆಯ ಸಂಕೀರ್ಣ ಕಾರ್ಯಚಟುವಟಿಕೆಗಳ ಒಳನೋಟಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ನಿಯಮಿತವಾದ ಅಭ್ಯಾಸವು ನಮ್ಮ ಬುದ್ಧಿ ಮತ್ತೆಯ ಮಟ್ಟವನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮವಾದ ಏಕಾಗ್ರತೆಯ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಈಗ ಇಲ್ಲಿ ಅಂತಹುದೇ ಒಂದು ಆಪ್ಟಿಕಲ್ ಇಲ್ಯೂಷನ್ ಸವಾಲು ನಿಮ್ಮ ಮುಂದೆ ಇದ್ದು, ಇದು ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎನ್ನುವುದಕ್ಕೆ ಒಂದು ಸವಾಲಾಗಲಿದೆ…
ಈ ಚಿತ್ರದಲ್ಲಿ ಮರವೊಂದರ ಕೆಳಗೆ ಕುಳಿತಿರುವ ವ್ಯಕ್ತಿಯೊಬ್ಬನು ಹಕ್ಕಿಗಳಿಗೆ ಆಹಾರ ನೀಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದರೆ ಇದೇ ಚಿತ್ರದಲ್ಲಿ ನಿಮಗೆ ಕಾಣದಂತೆ ಒಂದು ಕುದುರೆ ಕೂಡಾ ಅಡಗಿದೆ. ಆ ಕುದುರೆಯನ್ನು ಗುರುತಿಸಲು ನಿಮಗೆ ಇರುವ ಸಮಯ ಕೇವಲ 10 ಸೆಕೆಂಡ್ ಗಳು ಮಾತ್ರ. ಈ ಕಾಲಾವಧಿಯಲ್ಲಿ ಕುದುರೆಯನ್ನು ಪತ್ತೆ ಹಚ್ಚಲು ಚುರಕಾದ ಮೆದುಳು ಮತ್ತು ತೀಕ್ಷ್ಣವಾದ ದೃಷ್ಟಿ ಎರಡೂ ಅವಶ್ಯವಾಗಿದೆ.
ಒಂದು ವೇಳೆ ನಿಮ್ಮ ದೃಷ್ಟಿ ಮತ್ತು ಬುದ್ಧಿ ಚುರಕಾಗಿದೆ ಎನ್ನುವುದಾದರೆ ತಡ ಮಾಡದೇ ನೀವು ಈ ಚಿತ್ರದಲ್ಲಿರುವ ಕುದುರೆಯನ್ನು ಕಂಡು ಹಿಡಿಯಿರಿ.. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ನಿಮಗೆ ಈ ಚಿತ್ರದಲ್ಲಿರುವ ಕುದುರೆ ಬಹಳ ಸುಲಭವಾಗಿ ನಿಮ್ಮ ಕಣ್ಣಿಗೆ ಕಾಣುವುದು. ಒಂದು ವೇಳೆ ಹತ್ತು ಸೆಕೆಂಡ್ ಗಳಲ್ಲಿ ಕುದುರೆ ಕಂಡರೆ ನಿಮ್ಮ ದೃಷ್ಟಿ ಖಂಡಿತ ಚುರಕಾಗಿದೆ ಎಂದರ್ಥ.