ಈ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರದಲ್ಲಿ ಈ ನೀವು ನರಿಯು ಎಲ್ಲಿದೆ ಎನ್ನುವುದನ್ನು ಕಂಡು ಹಿಡಿಯಬಲ್ಲಿರಾ? ಹೌದು, ಈ ಚಿತ್ರದಲ್ಲಿ ಒಂದು ಕೆಂಪು ನರಿ ಜಾಣತನದಿಂದ ಅಡಗಿಕೊಂಡಿದೆ. ಈ ದೃಷ್ಟಿ ಭ್ರಮೆಯ ಸವಾಲನ್ನು ಪರಿಹರಿಸಲು ನಿಮ್ಮ ತೀಕ್ಷ್ಣ ದೃಷ್ಟಿ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಬಳಸಿ ನೋಡಿ. ಕಾಡಿನಲ್ಲಿ ಅಡಗಿರುವ ನರಿಯನ್ನು ನಿಗಧಿತ ಸಮಯದಲ್ಲಿ ಗುರುತಿಸಲು 10 ಜನರಲ್ಲಿ ಒಬ್ಬರಿಗೆ ಮಾತ್ರವೇ ಸಾಧ್ಯವಾಗುತ್ತಿದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ನರಿಯನ್ನು ಗುರುತಿಸುವುದಕ್ಕೆ ನಿಮಗೆ ಇರುವ ಸಮಯ ಕೇವಲ 8 ಸೆಕೆಂಡುಗಳು ಮಾತ್ರವೇ ಆಗಿರುವುದರಿಂದ ಈ ಸವಾಲು ಖಂಡಿತ ನಿಮಗೆ ಬಹಳ ಆಸಕ್ತಿಕರವಾಗಿರುವುದು ಮಾತ್ರವೇ ಅಲ್ಲದೇ ಅದು ಅಷ್ಟೇ ಕಷ್ಟಕರವಾಗಿರುತ್ತದೆ. ನರಿಯು ಅಡಗಿರುವುದು ವಾಸ್ತವ, ಆದರೆ ಸರಳ ಹದ್ದಿನಂತಹ ದೃಷ್ಟಿ ಹೊಂದಿರುವ 1% ಜನರು ಮಾತ್ರ ಅದನ್ನು ಬಹಳ ಬೇಗ ಗುರುತಿಸುವರು.
ಚಿತ್ರವನ್ನು ಚೆನ್ನಾಗಿ ಗಮನಿಸಿ ನೋಡಿ. ಮೊದಲ ನೋಟದಲ್ಲಿ, ನಿಮಗೆ ಹಿಮ ಸುತ್ತುವರೆದಿರುವ ಕಾಡಿನಲ್ಲಿ ಒಣಗಿ ಕೊಂಬೆಗಳೊಂದಿಗೆ ನಿಂತಿರುವ ಮರವೊಂದು ಮಾತ್ರವೇ ಕಾಣುತ್ತದೆ. ಅಲ್ಲಿ ಬೇರೇನೂ ಇಲ್ಲ ಎನಿಸುತ್ತದೆ. ಆದರೆ ಈ ಚಿತ್ರದಲ್ಲಿ ನರಿಯೊಂದು ಅಡಗಿದೆ ಎನ್ನುವುದು ನಿಜ. ಅನೇಕರು ಎಲ್ಲಿದೆ ನರಿ ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ ಆದರೆ ಈ ಚಿತ್ರದಲ್ಲಿ ಅಡಗಿರುವ ನರಿಯನ್ನು ಕಂಡುಹಿಡಿಯಲು ಅವರಿಂದ ಸಾಧ್ಯವಾಗುತ್ತಿಲ್ಲ.
ಒಂದು ವೇಳೆ ನೀವು ನಿಗಧಿತ ಸಮಯದಲ್ಲಿ ನರಿಯನ್ನು ಕಂಡು ಹಿಡಿದರೆ ಅಥವಾ ಎಲ್ಲಿದೆ ಎಂದು ಗುರುತಿಸಿದ್ದರೆ ಖಂಡಿತ ನಿಮ್ಮ ದೃಷ್ಟಿ ಚುರುಕಾಗಿದೆ ಮತ್ತು ವೀಕ್ಷಣಾ ಕೌಶಲ್ಯವು ಅದ್ಬುತವಾಗಿದೆ ಎನ್ನುವುದರಲ್ಲಿ ಅನುಮಾನ ಬೇಡ. ಒಂದು ವೇಳೆ ನಿಮಗೆ ನರಿ ಸಿಗದೇ ಇದ್ದರೆ ಚಿಂತೆ ಬೇಡ, ಇಲ್ಲೇ ಉತ್ತರ ಇರುವ ಚಿತ್ರ ನೀಡಲಾಗಿದ್ದು, ಅದರಲ್ಲಿ ನರಿ ಎಲ್ಲಿದೆ ಎಂದು ನೋಡಬಹುದಾಗಿದೆ.