ಆಪ್ಟಿಕಲ್ ಇಲ್ಯೂಷನ್ಸ್ ನಮ್ಮ ಬುದ್ಧಿಗೆ ಕೆಲಸವನ್ನು ನೀಡಲು, ದೃಷ್ಟಿಯ ತೀಕ್ಷ್ಮಣೆತೆಯನ್ನು ಅಳೆಯಲು, ಮೆದುಳಿಗೆ ಇನ್ನಷ್ಟು ಕೆಲಸ ನೀಡಲು ರಚನೆ ಮಾಡಲಾದ ವಿಶೇಷವಾದ ಚಿತ್ರಗಳಾಗಿವೆ. ಅವುಗಳನ್ನು ದೃಷ್ಟಿ ಭ್ರಮೆಗಳು, ದೃಶ್ಯ ಭ್ರಮೆಗಳು ಎಂದೂ ಸಹಾ ಕರೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಸರಳ ಬುದ್ಧಿಮತ್ತೆ ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ದೃಷ್ಟಿ ಭ್ರಮೆಯ ಚಿತ್ರಗಳ ಜನಪ್ರಿಯತೆಯು ಸಾಕಷ್ಟು ವ್ಯಾಪಕವಾಗಿ ಹೆಚ್ಚಾಗುತ್ತಿದೆ.
ಆಪ್ಟಿಕಲ್ ಇಲ್ಯೂಷನ್ ನ ಚಿತ್ರಗಳಲ್ಲಿ ನಾವು ನೋಡುವುದು ಒಂದಾದರೆ ಆ ದೃಶ್ಯದಲ್ಲಿ ನಮ್ಮ ದೃಷ್ಟಿಗೆ ಕಾಣದೇ ಕೆಲವೊಂದು ವಿಷಯಗಳು ಅಡಗಿರುತ್ತವೆ. ಅವುಗಳನ್ನು ಕಂಡು ಹಿಡಿಯುವುದು ನಮಗೆ ಸವಾಲಾಗಿರುತ್ತದೆ. ಒಂದು ವೇಳೆ ನಾವು ಅದರಲ್ಲಿ ಅಡಗಿರುವ ವಿಷಯಗಳನ್ನು ನಿಗಧಿತ ಸಮಯದೊಳಗೆ ಕಂಡು ಹಿಡಿದರೆ ನಮ್ಮ ಮೆದುಳು ಮತ್ತು ದೃಷ್ಟಿ ಎಷ್ಟು ಚುರುಕಾಗಿದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.
ಇಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ, ನೀವು ಅಂಕುಡೊಂಕಾದ ಮಾದರಿಯನ್ನು ನೋಡಬಹುದಾಗಿದೆ. ಈ ಚಿತ್ರದಲ್ಲಿ ಒಂದು ವನ್ಯ ಪ್ರಾಣಿಯು ಅಡಗಿದೆ. ಈ ಪ್ರಾಣಿಯು ಎಲ್ಲಿದೆ ಎಂದು ಕಂಡು ಹಿಡಿಯಲು ನಿಮಗೆ ನೀಡುವ ಕಾಲಾವಕಾಶ ಕೇವಲ 5 ಸೆಕೆಂಡುಗಳು. ಈ ಅವಧಿಯಲ್ಲಿ ನೀವು ಅಡಗಿರುವ ಪ್ರಾಣಿಯನ್ನು ಕಂಡುಹಿಡಿಯುವುದು ನಿಮ್ಮ ಮುಂದಿನ ಸವಾಲಾಗಿದೆ. ಇನ್ನೇಕೆ ತಡ ಈ ಚಿತ್ರದಲ್ಲಿನ ಪ್ರಾಣಿಯನ್ನು ಹುಡುಕಲು ಆರಂಭಿಸಿ.
ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ಪರೀಕ್ಷಿಸಲು ನಿಮಗೆ ಇದೊಂದು ಬಹಳ ಉತ್ತಮ ಅವಕಾಶವಾಗಿದೆ. ಅಡಗಿರುವ ಪ್ರಾಣಿಯು ಚಿತ್ರದಲ್ಲಿ ಎಲ್ಲೋ ಒಂದು ಕಡೆ ಸುಪ್ತವಾಗಿದೆ, ಚಿತ್ರದ ಎಲ್ಲಾ ಭಾಗಗಳನ್ನು ಸಹಾ ಬಹಳ ಎಚ್ಚರಿಕೆಯಿಂದ ಪರಿಶೀಲಿಸಿ. ಆಗ ನಿಮಗೆ ಆ ಪ್ರಾಣಿ ಖಂಡಿತ ಸಿಗುತ್ತದೆ.