ಬಾಲಿವುಡ್ ಸಿನಿಮಾ ನಿರ್ದೇಶಕ ದಿ ಕಾಶ್ಮೀರ್ ಫೈಲ್ಸ್ ಮೂಲಕ ಇಡೀ ದೇಶದಲ್ಲೊಂದು ಸಂಚಲವನ್ನು ಸೃಷ್ಟಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ಸಕ್ರಿಯವಾಗಿದ್ದಾರೆ. ಪ್ರಸ್ತುತ ಅವರು ದಿ ವ್ಯಾಕ್ಸಿನ್ ವಾರ್ ಎನ್ನುವ ವೆಬ್ ಸಿರೀಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನೆಟ್ಟಿಗರಿಂದ ಅವರಿಗೆ ಒಂದು ಸವಾಲು ಎದುರಾಗಿದೆ. ನೆಟ್ಟಿಗರಲ್ಲಿ ಒಬ್ಬರು ವಿವೇಕ್ ಅಗ್ನಿಹೋತ್ರಿಗೆ ಖಡಕ್ ಸವಾಲನ್ನು ಹಾಕಿದ್ದಾನೆ.
ಇಡೀ ದೇಶವನ್ನೆ ಬೆಚ್ಚಿ ಬೀಳಿಸಿರುವಂತಹ ಮಣಿಪುರದ ಅಮಾನವೀಯ ಘಟನೆಯ ಕುರಿತಾಗಿ ಒಂದು ಸಿನಿಮಾ ಮಾಡಿ ಎಂದು ನೆಟ್ಟಿಗನೊಬ್ಬರು ನಿರ್ದೇಶಕನಿಗೆ ಸವಾಲನ್ನು ಹಾಕಿದ್ದು, ಇದಕ್ಕೆ ವಿವೇಕ್ ಅಗ್ನಿಹೋತ್ರಿ ಖಡಕ್ ಆಗಿಯೇ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಟ್ವೀಟ್ ಮಾಡುತ್ತಿದ್ದು, ಇದನ್ನು ನೋಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ, ನೀವು ಗಂಡ್ಸೇ ಆಗಿದ್ರೆ ಮಣಿಪುರ ಫೈಲ್ಸ್ ಸಿನಿಮಾ ಮಾಡಿ ಎಂದಿದ್ದಾರೆ. ಈ ಟ್ವೀಟ್ ವೈರಲ್ ಆದ್ಮೇಲೆ ವಿವೇಕ್ ಅಗ್ನಿಹೋತ್ರಿ ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವಿವೇಕ್ ತಮ್ಮ ಪ್ರತಿಕ್ರಿಯೆಯಲ್ಲಿ,
ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಇಂಥ ಎಲ್ಲಾ ಸಿನಿಮಾವನ್ನು ನನ್ನಿಂದಲೇ ಮಾಡಿಸುತ್ತೀರಾ? ನಿಮ್ಮ ಟೀಮ್ ಇಂಡಿಯಾದಲ್ಲಿ ಗಂಡಸ್ತನ ಇರುವ ಫಿಲ್ಮ್ ಮೇಕರ್ ಯಾರೂ ಇಲ್ವಾ?’ ಎಂದು ಮರುಪ್ರಶ್ನೆ ಹಾಕಿದ್ದಾರೆ. ವಿವೇಕ್ ಅವರು ಬಳಸಿರುವ ಇಂಡಿಯಾ ಪದ ಈಗ ಚರ್ಚೆಗೆ ಕಾರಣವಾಗಿದೆ.