ಶಾರೂಖ್ ಖಾನ್ ರೊಮ್ಯಾನ್ಸ್ ಮಾಡಲ್ವ? ತನ್ನ ಕಿಸ್ಸಿಂಗ್ ವಿವಾದಕ್ಕೆ ನವಾಜುದ್ದೀನ್ ಶಾಕಿಂಗ್ ರಿಪ್ಲೈ

ಬಾಲಿವುಡ್ ನ ಪ್ರಖ್ಯಾತ ನಟ, ನವಾಜುದ್ದೀನ್ ಸಿದ್ದಿಕಿ ನಟಿ ಕಂಗನಾ ರಣಾವತ್ ನಿರ್ಮಾಣದ ಟಿಕು ವೆಡ್ಸ್ ಶೇರು ಸಿನಿಮಾ ಮೂಲಕ ನಾಯಕನಾಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಸಿನಿಮಾದ ಟ್ರೈಲರ್ ಸಹಾ ಬಿಡುಗಡೆಯಾಗಿದೆ. ಚಿತ್ರ ತಂಡವು ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ.ಟೀಕು ವೆಡ್ಸ್ ಶೇರು ಸಿನಿಮಾದ ಒಂದು ದೃಶ್ಯದ ವಿಚಾರವಾಗಿ ಸಾಕಷ್ಟು ಸುದ್ದಿಗಳಾಗಿದೆ. ಅಲ್ಲದೇ ಈ ದೃಶ್ಯ ಒಂದು ಹೊಸ ವಿ ವಾ ದಕ್ಕೆ ಸಹಾ ಕಾರಣವಾಗಿದೆ‌. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಹೌದು, ಟೀಕು ವೆಡ್ಸ್ ಶೇರು ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ನಾಯಕಿಗೆ ಲಿಪ್ ಲಾಕ್ ಮಾಡಿದ್ದಾರೆ.

ಇದೇ ದೃಶ್ಯವೀಗೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ನವಾಜುದ್ದೀನ್ ಸಿದ್ದಿಕಿ ಅವರಿಗೀಗ 49 ವರ್ಷ ವಯಸ್ಸು, ಟೀಕು ವೆಡ್ಸ್ ಶೇರು ಸಿನಿಮಾದ ನಾಯಕಿ ಅವ್ನೀತ್ ಕೌರ್ ಗೆ ಈಗ ಕೇವಲ 21 ವರ್ಷ ವಯಸ್ಸು. ಮಗಳ ವಯಸ್ಸಿನ ನಟಿಗೆ ಕಿಸ್ ಮಾಡಿದ್ದು ತಪ್ಪು ಎನ್ನುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ನಿಮ್ಮಿಂದ ಇಂತಹುದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ಈ ವಿಚಾರ ಸಾಕಷ್ಟು ಚರ್ಚೆಗಳಾದ ಮೇಲೆ ಈ ವಿಚಾರಕ್ಕೆ ಈಗ ಈ ನವಾಜುದ್ದೀನ್ ಸಿದ್ದಿಕಿ ತಮ್ಮ ಕಡೆಯಿಂದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನವಾಜುದ್ದೀನ್ ಅವರು ರೊಮ್ಯಾನ್ಸ್ ಎನ್ನುವುದಕ್ಕೆ ವಯಸ್ಸಿನ ಯಾವುದೇ

ಮಿತಿಯಿಲ್ಲ. ಸಮಸ್ಯೆ ಏನೆಂದರೆ ಯುವಕರಿಗೆ ಯಾವುದೇ ರೊಮ್ಯಾನ್ಸ್ ಉಳಿದಿಲ್ಲ. ನಾವು ಪ್ರೀತಿಯಲ್ಲಿ ಇರುತ್ತೇವೆ. ಪ್ರೀತಿ ವರ್ಷಗಟ್ಟಲೇ ಹಾಗೇ ಇರುತ್ತೆ. ಶಾರೂಖ್ ಖಾನ್ ಇಂದಿಗೂ ರೊಮ್ಯಾಂಟಿಕ್ ಪಾತ್ರಗಳನ್ನು ಮಾಡುತ್ತಲೇ ಇದ್ದಾರೆ. ಇಂದಿನ ಯುವ ಪೀಳಿಗೆಗೆ ರೊಮ್ಯಾನ್ಸ್ ಗೊತ್ತಿಲ್ಲ ಎಂದಿದ್ದಾರೆ. ಇಂದಿನ ಯುವ ಪೀಳಿಗೆ ರೊಮ್ಯಾನ್ಸ್ ನಲ್ಲಿ ಬದುಕುತ್ತಿಲ್ಲ, ವಾಟ್ಸಾಪ್ ನಲ್ಲಿ ಪ್ರೀತಿಸಿ ಅಲ್ಲೇ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಎಲ್ಲಾ ಕೂಡಾ ವಾಟ್ಸಾಪ್‌ ನಲ್ಲೇ ನಡೆಯುತ್ತೆ. ಅದು ಪ್ರೀತಿಯೇ ಆಗಿರಲಿ ಅಥವಾ ಬ್ರೇಕಪ್ ಆಗಿರಲಿ. ಇದಕ್ಕೆ ಒಂದು ಕಾರಣ ಕೂಡಾ ಇದೆ. ರೊಮ್ಯಾನ್ಸ್ ನಲ್ಲಿ ಯಾರು ಬದುಕಿದ್ದಾರೋ ಅವರು ರೋಮ್ಯಾನ್ಸ್ ಮಾಡಬಹುದು. ಬೇರೆ ಯಾರು ಮಾಡ್ತಾರೆ ಎಂದು ಸಿದ್ಧಿಕಿ ತಮ್ಮನ್ನು ಟೀಕಿಸಿದವರಿಗೆ ಉತ್ತರ ನೀಡಿದ್ದಾರೆ.‌

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More