ನನ್ನ ಜೀವಕ್ಕೆ ಬೆದರಿಕೆ ಇದೆ: ಪೋಲಿಸರ ಮುಂದೆ ಹೊಸ ಬೇಡಿಕೆ ಇಟ್ಟ ಹಿರಿಯ ನಟ ನರೇಶ್!

ಇತ್ತೀಚಿನ ದಿನಗಳಲ್ಲಿ ತೆಲುಗಿನ ಹಿರಿಯ ನಟ ನರೇಶ್ ಅವರು ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾ ಸಾಕಷ್ಟು ಟ್ರೆಂಡ್ ಆಗಿದ್ದಾರೆ. ನರೇಶ್ ಮತ್ತು ಪವಿತ್ರ ಲೋಕೇಶ್ ನಡುವಿನ ಸ್ನೇಹ, ಪ್ರೀತಿ ಮತ್ತು ಸಂಬಂಧದ ವಿಚಾರವಾಗಿ ಈಗಾಗಲೇ ಬಹಳಷ್ಟು ವಿಷಯಗಳು ಮಾಧ್ಯಮಗಳ ಸುದ್ದಿಗಳಾಗಿವೆ. ಇವರ ಸ್ನೇಹ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ನರೇಶ್ ಗೆ ಸಂಬಂಧಪಟ್ಟಂತಹ ಮತ್ತೊಂದು ಹೊಸ ವಿಚಾರ ಹರಿದಾಡಿದೆ.

ನಟ ನರೇಶ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದು ಬಂದೂಕು ಪರವಾನಗಿಯ ಅನುಮತಿಯನ್ನು ಕೋರಿ ಎಸ್ ಪಿ ಅವರನ್ನು ಭೇಟಿಯಾಗಿದ್ದಾರೆ. ತನ್ನ ಸ್ವಯಂ ರಕ್ಷಣೆಗಾಗಿ ಪರವಾನಿಗೆ ಇರುವ ರಿವಾಲ್ವರ್ ಬೇಕು ಎಂದು ನರೇಶ್ ಕೇಳಿದ್ದಾರೆ. ಈ ನಿಟ್ಟಿನಲ್ಲಿ ನರೇಶ್ ಅವರು ಶ್ರೀ ಸತ್ಯ ಸಾಯಿ ಜಿಲ್ಲೆಯ ಎಸ್ ಪಿ ಮಾಧವ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. 2008 ರಲ್ಲಿ ನರೇಶ್ ಅವರಿಗೆ ಗನ್ ಲೈಸೆನ್ಸ್ ಮಂಜೂರಾಗಿತ್ತು. ನರೇಶ್ ಹೆಸರು ನಕ್ಸಲೇಟ್ ಗಳ ಹಿಟ್ ಲಿಸ್ಟ್ ನಲ್ಲಿ ಇದ್ದ ಕಾರಣ ಅವರಿಗೆ ಬಂದೂಕು ಪಡೆಯುವ ಪರವಾನಗಿ ನೀಡಲಾಗಿತ್ತು.

ಈಗಲೂ ಸಹಾ ತಮ್ಮ ಜೀವಕ್ಕೆ ಬೆದರಿಕೆ ಇರುವ ಕಾರಣ ನಟ ನರೇಶ್ ಅವರು ಗನ್ ಲೈಸೆನ್ಸ್ ನವೀಕರಣಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಈ ವಿಚಾರ ಈಗ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ನರೇಶ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳುತ್ತಿರುವುದು ಇದೇ ಮೊದಲನೇ ಸಲವಲ್ಲ. ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಈ ಹಿಂದೆ ಪೊಲೀಸ್ ರಿಗೆ ದೂರನ್ನು ನೀಡಿದ್ದರು‌. ಇದೀಗ ಮತ್ತೊಮ್ಮೆ ಅವರು ಈ ವಿಷಯವನ್ನು ಸ್ಥಾಪಿಸಿರುವುದು ಚರ್ಚೆಯನ್ನು ಹುಟ್ಟು ಹಾಕಿದೆ.

ರಮ್ಯಾ ರಘುಪತಿ ಅವರಿಂದ ತಾನು ಸಾಕಷ್ಟು ವೇದನೆಯನ್ನು ಅನುಭವಿಸಿದ್ದು, ಸುಪಾರಿ ಗ್ಯಾಂಗ್ನ ಜೊತೆ ಸೇರಿ ತನ್ನನ್ನು ಕೊಲೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿರುವ ನರೇಶ್ , ನಾನು ಅಪಾಯದಲ್ಲಿದ್ದೇನೆ, ಕೊಲೆಯಾಗುವ ಭಯದಿಂದಾಗಿ ಒಂಟಿಯಾಗಿ ಎಲ್ಲಿಗೂ ಹೋಗುತ್ತಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇನ್ನು ಅವರ ಮೂರನೇ ಪತ್ನಿ ರಮ್ಯಾ ರಘುಪತಿಯವರು ನರೇಶ್ ತನ್ನನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿದ್ದು, ಅವರಿಗೆ ವಿಚ್ಛೇದನ ನೀಡುವ ಉದ್ದೇಶ ನನಗೆ ಇಲ್ಲ ಎಂದು ಹೇಳಿದ್ದಾರೆ.

Related posts

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

This website uses cookies to improve your experience. We'll assume you're ok with this, but you can opt-out if you wish. Read More