ವಂಶಿಕಾ ಹೆಸರಲ್ಲಿ ವಂಚನೆ: ಆರೋಪಿ ನಿಶಾ ಮೇಲೆ ಹರಿದು ಬರ್ತಿವೆ ಸಾಲು ಸಾಲು ದೂರು

ನಟ , ನಿರೂಪಕ, ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರು ದುರುಪಯೋಗ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದಲೂ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋಗಳು ಹರಿದಾಡುತ್ತಿದೆ‌. ಈ ಪ್ರಕರಣದಲ್ಲಿ ವಂಚನೆಯ ಆರೋಪಿ ನಿಶಾ ನರಸಪ್ಪ ಅವರೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದು, ಮತ್ತೊಂದು ಕಡೆ ನಿಶಾ ಅವರ ಮೇಲೆ ದೂರುಗಳು ಹರಿದು ಬರುತ್ತಿವೆ.

ವರದಿಗಳ ಪ್ರಕಾರ ಇಂದು ಬೆಳಗ್ಗೆ 10 ಗಂಟೆಯ ನಂತರ 20ಕ್ಕೂ ಹೆಚ್ಚು ಕುಟುಂಬಗಳು ನಿಶಾ ವಿರುದ್ಧ ದೂರನ್ನು ದಾಖಲಿಸಿವೆ ಎನ್ನಲಾಗಿದೆ. ಸದಾಶಿವನಗರ ಪೊಲೀಸ್ ಅಧಿಕಾರಿಗಳು, ವಂಚನೆಗೊಳಗಾದ ಕುಟುಂಬಗಳು, ತಾವು ವಾಸಿಸುತ್ತಿರುವ ಮನೆಯ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಮಕ್ಕಳಿಗೆ ಫೋಟೊ ಶೂಟ್, ಆಲ್ಬಂ ಶೂಟ್, ಅವಕಾಶ ಕೊಡುವ ನೆಪದಲ್ಲಿ ನಿಶಾ ಹಲವರಿಗೆ ನಿಶಾ ನಾಮ ಹಾಕಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಒಂದಷ್ಟು ದೂರುಗಳು ದಾಖಲಾಗಿದ್ದು, ಈಗ ಇನ್ನಷ್ಟು ಹೊಸ ದೂರುಗಳು ದಾಖಲಾಗುತ್ತಿವೆ ಎನ್ನಲಾಗಿದೆ. ನಿಶಾ ತಾರಾ ಎನ್ನುವವರಿಗೆ ಇಪ್ಪತ್ತು ಲಕ್ಷ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಸಹಾ ಇದೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ನಿಶಾ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ನಲ್ಲಿ ದೂರು ದಾಖಲಾಗಿತ್ತು.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಕೇಸ್ ನಲ್ಲಿ ನಿಶಾ ಬರೋಬ್ಬರಿ 35 ಲಕ್ಷ ರೂಪಾಯಿಗಳ ವಂಚನೆ ಮಾಡಿರುವಂತಹ ವಿಚಾರವು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದರೆ ಲಾಭಾಂಶವನ್ನು ಕೊಡುವುದಾಗಿ ಹೇಳಿ ನಿಶಾ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಹೊರ ವಲಯದಲ್ಲಿ ಇರುವ ರೆಸಾರ್ಟ್ ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ ನಿಶಾ ಎನ್ನಲಾಗಿದೆ.

Related posts

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ

This website uses cookies to improve your experience. We'll assume you're ok with this, but you can opt-out if you wish. Read More