ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್‌ಗೆ (Hyderabad) ತೆರಳಬೇಕಿದ್ದ ವೇಳೆಯಲ್ಲಿ ಅವರು ರಾಜ್ಯಪಾಲ ಅವರು ಸುಮಾರು 15 ನಿಮಿಷಗಳು ತಡವಾಗಿ ಏರ್‌ಪೋರ್ಟ್‌ಗೆ (Bengaluru Airport) ಆಗಮಿಸಿದ ಕಾರಣದಿಂದಾಗಿ, ವಿಮಾನ ಅವರನ್ನು ಬಿಟ್ಟು ತೆರಳಿದ ಘಟನೆಯು ನಡೆದಿದೆ. ಈ ಘಟನೆಯಿಂದಾಗಿ ಥಾವರ್ ಚಂದ್ ಅವರು ಅಸಮಾಧಾನಗೊಂಡಿದ್ದಾರೆ ಮತ್ತು ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ.
ಗೆಹ್ಲೋಟ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಲುವಾಗಿ ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಹೊರಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಏರ್ ಏಶಿಯಾ ವಿಮಾನದಲ್ಲಿ ಹೊರಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ರಾಜ್ಯಪಾಲರು ಸುಮಾರು15 ನಿಮಿಷ ತಡವಾಗಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ತಲುಪುವ ವೇಳೆಗೆ ವಿಮಾನ ರಾಜ್ಯಪಾಲರನ್ನು ಬಿಟ್ಟು ತನ್ನ ಹಾರಾಡ ನಡೆಸಿದೆ.
ಇದರಿಂದ ಕುಪಿತರಾದ ಮಾನ್ಯ ರಾಜ್ಯಪಾಲರು ಅಧಿಕಾರಗಳನ್ನು ಕರೆಸಿ ಈ ವಿಚಾರವಾಗಿ ಮಾತನಾಡಿದ್ದಾರೆ. ಅಲ್ಲದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ವಿಮಾನ ಕಂಪನಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅವರು ಮುಂದಾಗಿದ್ದಾರೆ. ನಂತರ ಅವರು 3:30 ರ ವಿಮಾನದಲ್ಲಿ ಹೈದರಾಬಾರ್ ಗೆ ತಲುಪಿದ್ದು, ಕಾರ್ಯಕ್ರಮದಲ್ಲಿ ತಡವಾಗಿ ಹಾಜರಾಗಿದ್ದಾರೆ ಎನ್ನಲಾಗಿದೆ.