ದೀಪಿಕಾ ಪಡುಕೋಣೆ ನನಗಿಷ್ಟ, ಅನುಷ್ಕಾ ಬದಲಾಗಿ ದೀಪಿಕಾ ಹೆಸರು ಹೇಳಿ ಶಾಕ್ ಕೊಟ್ಟ ನಟ ಪ್ರಭಾಸ್

ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ (Prabhas) ಮತ್ತು ಪಠಾಣ್ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಜೋಡಿಯಾಗಿ ಕಲ್ಕಿ (Kalki) ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಇನ್ನು ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸ್ನೇಹದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಾಗಿದೆ. ಅವರಿಬ್ಬರು ಉತ್ತಮ ಸ್ನೇಹಿತರೆಂದೇ ಹೇಳಲಾಗುತ್ತದೆ. ಆದರೆ ಈಗ ನಟ ಪ್ರಭಾಸ್ ದೀಪಿಕಾ ಪಡುಕೋಣೆ ಕುರಿತಾಗಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ನಟ ಪ್ರಭಾಸ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅನುಷ್ಕಾ ಅಲ್ಲ, ನನಗೆ ದೀಪಿಕಾ ಪಡುಕೋಣೆ ಅಂದರೆ ಇಷ್ಟ ಅಂತ ಹೇಳು ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಾಹುಬಲಿ ನಟನ ಮಾತು ಈಗ ದೊಡ್ಡ ಸದ್ದು ಮಾಡುತ್ತಿದೆ.
ಸಮಾರಂಭವೊಂದರಲ್ಲಿ ಪ್ರಭಾಸ್ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಗ್ಗೆ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಸೆಟ್‌ಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ.

ದೀಪಿಕಾ ಸೆಟ್‌ ಗೆ ಬಂದಾಗ ಎಲ್ಲರೂ ಸಹಾ ಸಂತೋಷವಾಗಿರುತ್ತಾರೆ. ಆದ್ದರಿಂದಲೇ ನನಗೆ ನಟಿ ದೀಪಿಕಾ ಪಡುಕೋಣೆ ಎಂದರೆ ಬಹಳ ಇಷ್ಟ. ನಾನು ಯಾವಾಗಲೂ ಆಕೆಯನ್ನ ಇಷ್ಟ ಪಡ್ತೀನಿ ಅಂತ ಹೇಳಿದ ಮಾತುಗಳು ಭರ್ಜರಿಯಾಗಿ ವೈರಲ್ ಆಗುತ್ತಿದೆ. ನಟ ಪ್ರಭಾಸ್ ಅವರ ಹೆಸರು ಈಗಾಗಲೇ ಅನುಷ್ಕಾ ಶೆಟ್ಟಿ(Anushka Shetty) ಅನಂತರ ಕೃತಿ ಸನೋನ್ (Kriti Sanon) ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸುದ್ದಿಗಳು ಹರಿದಾಡಿತ್ತು. ಈಗ ದೀಪಿಕಾ ಬಗ್ಗೆ ಅವರಾಡಿದ ಮಾತುಗಳು ಅಚ್ಚರಿ ಉಂಟು ಮಾಡಿದೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More