ಅನಕ್ಷರಸ್ಥ ನಾಯಕರು ಭಾರತವನ್ನು ಆಳುತ್ತಿದ್ದಾರೆ: ನಟಿಯ ಮಾತು ಹೊತ್ತಿಸಿದ ಕಿಚ್ಚು, ನೆಟ್ಟಿಗರ ಆಕ್ರೋಶ

ಬಾಲಿವುಡ್ ನಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟಿ ಕಾಜೋಲ್ ಅಲ್ಲಿನ ಸ್ಟಾರ್ ನಟಿಯರಲ್ಲಿ ಒಬ್ಬರು. ದಕ್ಷಿಣದಲ್ಲೂ ಈ ನಟಿ ಒಂದೆರಡು ಸಿನಿಮಾ ಮಾಡಿದ್ದು ಬಿಟ್ಟರೆ ಮತ್ತೆ ಸಿನಿಮಾಗಳನ್ನು ಮಾಡಿಲ್ಲ. ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಜೊತೆ ಪ್ರೇಮ ವಿವಾಹವಾಗಿರುವ, ಕಾಜೋಲ್ ಸಿನಿಮಾಗಳಲ್ಲಿ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟಿ ಹೇಳಿದ ಒಂದು ಮಾತು ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.

ನಟಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದರಲ್ಲಿ, ನಾವು ದೂರದೃಷ್ಟಿ ಇಲ್ಲದ ಅನಕ್ಷರಸ್ಥ ನಾಯಕರಿಂದ ಆಳಲ್ಪಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಟಿಯು ಈ ಟ್ವೀಟ್ ಮಾಡಿದ್ದೇ ತಡ ಎನ್ನುವಂತೆ ಬಹಳಷ್ಟು ಜನರು ರಂಗಕ್ಕೆ ಧುಮುಕ್ಕಿದ್ದು ನಟಿಯನ್ನು ಸಾಕಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ. ಹೌದು, ನಟಿಯು ಇಲ್ಲಿ ಪರೋಕ್ಷವಾಗಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಟಿಯ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದವರು, ನಾಯಕರನ್ನು ಅನಕ್ಷರಸ್ಥ ಎನ್ನುವ ಮೊದಲು ಶಾಲಾ ಶಿಕ್ಷಣವನ್ನೇ ಪೂರ್ತಿ ಮಾಡದ ನೀವು ನಿಮ್ಮನ್ನು ನೋಡಿಕೊಳ್ಳಿ ಎಂದಿದ್ದಾರೆ ನೆಟ್ಟಿಗರು. ಇನ್ನೂ ಅನೇಕರು ಇವತ್ತು ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಸಾವಿರಾರು ಹುಡುಗಿಯರು ಏನು ಮಾಡ್ತಾ ಇದ್ದಾರೋ ನೀವು ಸಿನಿಮಾದಲ್ಲಿ ಅದನ್ನೇ ಮಾಡಿರೋದು ಅದು ಬಿಟ್ಟರೆ ನಿಮ್ಮ ಸಾಧನೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ನಿಮ್ಮ ಪತಿ ಇಬ್ಬರೂ ಏನು ಅಕ್ಷರಸ್ಥರಾ? ಇಂಗ್ಲಿಷ್ ಬಂದ ಮಾತ್ರಕ್ಕೆ ಅನಕ್ಷರಸ್ಥರು ಅನ್ನೋಲ್ಲಾ? ನೀವು ಅನಕ್ಷರಸ್ಥರಾಗಿ ಗುಟ್ಕಾ ವ್ಯಾಪಾರ ಮಾಡ್ತೀರಲ್ವ ನಾಚಿಕೆ ಆಗಲ್ವಾ? ಎಂದಿದ್ದಾರೆ ನೆಟ್ಟಿಗರು. ‌ಇನ್ನೂ ಕೆಲವರು ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಚಾರಿಟಿ ಎನ್ನುವುದು ನಿಮಗೆ ತಿಳಿದೇ ಇಲ್ಲ. ಸರಿ ಫಿಲ್ಮ್ ಫೇರ್ ಬಿಟ್ಟು ಬೇರೆ ಯಾವ ಪ್ರಶಸ್ತಿ ಪಡೆದಿದ್ದೀರಿ ಎಂದು ನೆಟ್ಟಿಗರು ಕ್ಲಾಸ್ ತಗೊಂಡಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ನಟಿ ತನ್ನ ಟ್ವೀಟ್ ಗೆ ಸ್ಪಷ್ಟನೆ ನೀಡುತ್ತಾ, ನಾನು ಯಾವುದೇ ರಾಜಕೀಯ ನಾಯಕರನ್ನು ಉದ್ದೇಶಿಸಿ ಹಾಗೆ ಹೇಳಲಿಲ್ಲ. ಶಿಕ್ಷಣದ ಮಹತ್ವ ಏನು ಅಂತ ಹೇಳೋದು ನನ್ನ ಉದ್ದೇಶವಾಗಿತ್ತು. ನಮ್ಮ ದೇಶವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ. ನನ್ನ ಟ್ವೀಟ್ ನ ಉದ್ದೇಶ ಯಾವುದೇ ನಾಯಕರನ್ನು ನೋಯಿಸುವುದಾಗಿರಲಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More