ಜವಾನ್ ಸಿನಿಮಾದ ಒಂದೇ ಒಂದು ಹಾಡಿಗಾಗಿ ಇಷ್ಟೊಂದು ಕೋಟಿನಾ? ಶಾರೂಖ್ ಹಾಡಿನ ವಿಶೇಷತೆ ಏನು?

ಬಾಲಿವುಡ್ ನಟ ಕಿಂಗ್ ಖಾನ್ ಖ್ಯಾತಿಯ ಶಾರೂಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಜವಾನ್ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆಟ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಜವಾನ್ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಸಿನಿಮಾದಲ್ಲಿ ನಟ, ನಟಿಯರು ಹಾಗೂ ಅವರ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಮೂಲಕ ನಯನತಾರಾ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.

ಇದೀಗ ಈ ಸಿನಿಮಾಗಳ ಹಾಡುಗಳ ಸುದ್ದಿ ಸದ್ದನ್ನು ಮಾಡುತ್ತಿದೆ. ಜವಾನ್ ಸಿನಿಮಾದಲ್ಲಿನ ಒಂದೇ ಒಂದು ಹಾಡಿಗಾಗಿ ನಿರ್ದೇಶಕ ಅಟ್ಲಿ (Atlee) ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ ಹಾಗೂ ಸಿನಿ ಪ್ರೇಮಿಗಳಿಗೆ ಅಚ್ಚರಿಯನ್ನು ಮೂಡಿಸಿದೆ. ಈ ಹಾಡಿನಲ್ಲಿ ನಾಯಕ ಶಾರೂಖ್ ಜೊತೆಗೆ ಸಾವಿರಾರು ಜನ ಹುಡುಗಿಯರು ಹೆಜ್ಜೆ ಹಾಕಿದ್ದಾರೆ.

ಇದು ನಾಯಕನ ಇಂಟ್ರುಡಕ್ಷನ್ ಸಾಂಗ್ ಎನ್ನಲಾಗಿದ್ದು, ಬಹಳ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಈ ಹಾಡಿಗಾಗಿ ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಲೇಡಿ ಡಾನ್ಸರ್ ಗಳನ್ನು ಕರೆತಂದು ಡ್ಯಾನ್ಸ್ ಮಾಡಿಸಲಾಗಿದೆ ಎಂದು ಚಿತ್ರ ತಂಡ ಹೇಳಿದೆ. ಇನ್ನು ಈ ಹಾಡಿಗೆ ಶೋಬಿ ನೃತ್ಯ ಸಂಯೋಜನೆ ಮಾಡಿದ್ದು, ಸಂಗೀತವನ್ನು ನೀಡಿದ್ದಾರೆ ಅನಿರುದ್ಧ ರವಿಚಂದ್ರನ್.

Related posts

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

This website uses cookies to improve your experience. We'll assume you're ok with this, but you can opt-out if you wish. Read More