ಇನ್ಸ್ಟಾಗ್ರಾಂ ನಲ್ಲಿ ಲವ್, ಪ್ರೇಮಿಗಾಗಿ ಭಾರತಕ್ಕೆ ಬಂದ 47 ವಯಸ್ಸಿನ ಪೋಲೆಂಡ್ ಮಹಿಳೆ

ಪಬ್ಜಿ ಮೂಲಕ ಪರಿಚಯವಾದ ಪ್ರೇಮಿಗಾಗಿ ತನ್ನ ನಾಲ್ಕು ಮಕ್ಕಳ ಜೊತೆಗೆ ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ ಸೀಮಾ ಹೈದರ್‌ ವಿಚಾರ ಮಾದ್ಯಮಗಳಲ್ಲಿ ಇನ್ನೂ ಸುದ್ದಿಗಳಾಗಿ ಹರಿದಾಡಿದೆ ಅಲ್ಲದೇ ಸೀಮಾ ಹೈದರ್ ಕುರಿತಾಗಿ ಇನ್ನಷ್ಟು ತನಿಖೆಗಳು, ವಿಚಾರಣೆ ನಡೆಯುತ್ತಿರುವ ವಿಚಾರ ಕೂಡಾ ಸಾಕಷ್ಟು ಸುದ್ದಿಗಳಾಗಿರುವಾಗಲೇ, ಇದೀಗ ಅದನ್ನೇ ಹೋಲುವಂತಹ ಸ್ವಲ್ಪ ವಿಭಿನ್ನವಾದ ಒಂದು ಘಟನೆ ಅಥವಾ ಪ್ರೇಮ ಕಥೆ ಜಾರ್ಖಂಡ್‌ ನ ಹಜಾರಿಬಾಗ್‌ ನ ಖುತ್ರಾ ಗ್ರಾಮದಲ್ಲಿ ನಡೆದಿದೆ.

ಮೂಲತಃ ಪೋಲೆಂಡ್ ದೇಶದ ನಿವಾಸಿಯಾಗಿರುವ ಮಹಿಳೆ ಬಾರ್ಬರಾ ಪೋಲಾಕ್ ತನ್ನ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಬಂದಿದ್ದಾರೆ. ಈಕೆ ತನಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಜಾರ್ಖಂಡ್‌ ನ ಹಜಾರಿಬಾಗ್‌ ನ ಖುತ್ರಾ ಗ್ರಾಮದ 35 ವರ್ಷದ ಶಾದಾಬ್ ಮಲ್ಲಿಕ್ ಮೇಲಿನ ಪ್ರೀತಿಗಾಗಿ ಆತನ ಗ್ರಾಮಕ್ಕೆ ಬಂದಿದ್ದಾರೆ. ಶಾಬಾದ್ ಮತ್ತು 47 ವರ್ಷದ ಬಾರ್ಬರಾ ಇಬ್ಬರೂ 2021 ರಲ್ಲಿ ಇನ್ಸ್ಟಾಗ್ರಾಂ ಮೂಲಕ ಸ್ನೇಹಿತರಾಗಿದ್ದಾರೆ. ಅವರ ಈ ಸ್ನೇಹ ಸಂಬಂಧ ಇನ್ನಷ್ಟು ಆತ್ಮೀಯವಾಗಿದೆ.

ಇನ್ನು ಬಾರ್ಬರಾ ಈಗಾಗಲೇ ತಮ್ಮ ಪತಿಗೆ ವಿಚ್ಚೇದನ ನೀಡಿದ್ದಾರೆ. ಈಗ ಬಾರ್ಬರಾ ಮತ್ತು ಮಲ್ಲಿಕ್‌ ಅವರ ನಡುವೆ ಪ್ರೇಮ ಮೂಡಿದೆ. ಪ್ರೇಮಿಗಳಾಗಿರುವ ಇವರು ಇದೀಗ ಮದುವೆಯಾಗಲು ಸಿದ್ದರಾಗಿದ್ದು, ದಾಂಪತ್ಯ ಜೀವನವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಮದುವೆಯ ಹಿನ್ನೆಲೆಯಲ್ಲಿ ಹಜಾರಿಬಾಗ್ ಎಸ್‌ ಡಿಎಂ ನ್ಯಾಯಾಲಯಕ್ಕೆ ಇವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗ ಎಲ್ಲೆಡೆ ಈ ಜೋಡಿಯ ಫೋಟೋಗಳು ವೈರಲ್ ಆಗಿದೆ.

Related posts

ಭಾರತದ 2 ನೇ ಅತಿದೊಡ್ಡ ಸಂಯೋಜಿತ ಉಕ್ಕು ಸ್ಥಾವರವಾಗಿದ್ದು, ಇದು 3,800 ಕ್ಕೂ ಹೆಚ್ಚು ನೇರ ಉದ್ಯೋಗ ನೀಡುವ ಕಾರ್ಖಾನೆ ಕರ್ನಾಟಕದ ಕೊಪ್ಪಳದಲ್ಲಿ ಸ್ಥಾಪನೆ.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

This website uses cookies to improve your experience. We'll assume you're ok with this, but you can opt-out if you wish. Read More