ಆ ಕಾರಣಕ್ಕೆ ನಾನು ಕಿಸ್ಸಿಂಗ್ ಸೀನ್ ಮಾಡೋದಿಲ್ಲ: ಪ್ರಿಯಾಮಣಿ ಮಾತಿಗೆ ನೆಟ್ಟಿಗರ ಮೆಚ್ಚುಗೆ

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ, ಬಹುಭಾಷಾ ನಟಿ ಪ್ರಿಯಾಮಣಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಕಳೆದ ಕೆಲವು ದಿನಗಳಿಂದ ನಟಿಯು ತಮ್ಮ ಸಿನಿಮಾ ಅಥವಾ ವೆಬ್ ಸಿರೀಸ್ ವಿಚಾರಗಳ ಬದಲಾಗಿ ತಮ್ಮ‌ ಖಾಸಗಿ ಜೀವನದ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ತಾನು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಹೇಗೆಲ್ಲಾ ಟೀಕೆ ಗಳು ಬಂದವೆಂದು ಹೇಳುತ್ತಾ ಅದಕ್ಕೆ ತನ್ನ ನೇರ ಮತ್ತು ಖಡಕ್ ಉತ್ತರವನ್ನು ನೀಡುವ ಮೂಲಕ ಪ್ರಿಯಾಮಣಿ ಅವರು ಟೀಕೆ ಮಾಡುವವರಿಗೆ ಉತ್ತರ ನೀಡಿದ್ದರು.

ಪ್ರಿಯಾಮಣಿ ದಕ್ಷಿಣದ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ‌. ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದ ಐಟಂ ಹಾಡಿನಲ್ಲಿ ಶಾರೂಖ್ ಖಾನ್ ಜೊತೆ ಹೆಜ್ಜೆ ಹಾಕುವ ಮೂಲಕ, ಅನಂತರ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಮೂಲಕ ಬಾಲಿವುಡ್ ಮಂದಿಗೂ ಸಹಾ ಪರಿಚಿತರಾಗಿದ್ದಾರೆ. ಹೀಗೆ ಸಿನಿಮಾ, ವೆಬ್ ಸಿರೀಸ್ ಮಾತ್ರವೇ ಅಲ್ಲದೇ ಒಂದು ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಸಹಾ ಆಗಿದ್ದಾರೆ ನಟಿ ಪ್ರಿಯಾಮಣಿ.

ಪ್ರಿಯಮಣಿ ಅವರು ಸಿನಿಮಾಗಳಲ್ಲಿ ತಾನು ಯಾವುದೇ ಕಾರಣಕ್ಕೂ ಕೂಡಾ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎನ್ನುವ ನಿಯಮಕ್ಕೆ ಬದ್ಧರಾಗಿದ್ದಾರೆ. ಇದೇ ವಿಚಾರಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದು, ತಾನು ನಟಿಸುವ ಸಿನಿಮಾಗಳಲ್ಲಿ ಏಕೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎನ್ನುವುದಕ್ಕೆ ಕಾರಣವನ್ನು ನಟಿ ನೀಡಿದ್ದಾರೆ. ಹಾಗಾದರೆ ನಟಿ ಪ್ರಿಯಾಮಣಿ ತನ್ನ ಇಂತಹುದೊಂದು ನಿರ್ಧಾರಕ್ಕೆ ಹೇಳಿದ ಕಾರಣವೇನು? ತಿಳಿಯೋಣ ಬನ್ನಿ.

ಪ್ರಿಯಾಮಣಿ ಅವರು, ನಾನು ಆನ್ ಸ್ಕ್ರೀನ್ ಕಿಸ್ ಮಾಡುವುದಿಲ್ಲ, ಏಕೆಂದರೆ ನಾನು ಹಾಗೆ ಮಾಡಿದರೆ ನನ್ನ ಪತಿಗೆ ಉತ್ತರ ನೀಡಬೇಕಾಗುತ್ತೆ. ಅಲ್ಲದೇ ನನ್ನ ತಂದೆ, ತಾಯಿ ಮತ್ತು ಅತ್ತೆ, ಮಾವ ಇವರಿಗೆ ತೆರೆಯ ಮೇಲೆ ನಾನು ಇಂಟಿಮೇಟ್ ದೃಶ್ಯದಲ್ಲಿ ನಟಿಸುವುದನ್ನು ನೋಡಿ ಮುಜುಗರ ಉಂಟಾಗಬಾರದು. ಅದಕ್ಕೆ ನಾನು ಅಂತಹ ಸೀನ್ ಗೆ ಒಪ್ಪುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ನಟಿಯ ಮಾತಿಗೆ ಅನೇಕರು ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.

Related posts

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

This website uses cookies to improve your experience. We'll assume you're ok with this, but you can opt-out if you wish. Read More