ಆ ಇಬ್ಬರು ಸ್ಟಾರ್ ಹೀರೋಗಳು ಸಾಯುತ್ತಾರೆ: ಸಂಚಲನ ಸೃಷ್ಟಿಸಿದ ವೇಣು ಸ್ವಾಮಿ ಭವಿಷ್ಯವಾಣಿ

ಪ್ರಮುಖ ಜ್ಯೋತಿಷಿ ವೇಣುಸ್ವಾಮಿ ಇತ್ತೀಚಿನ ದಿನಗಳಲ್ಲಿ ತೆಲುಗು ಸಿನಿಮಾ ರಂಗ ಮತ್ತು ಅಲ್ಲಿನ ನಟರ ಕುರಿತಾಗಿ ನುಡಿಯುವ ಭವಿಷ್ಯವಾಣಿಗಳ ವಿಚಾರದಿಂದ ಸಾಕಷ್ಟು ಸದ್ದು ಸುದ್ದಿಯನ್ನು ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದ ಕಾರಣದಿಂದಲೇ ಕನ್ನಡ ನಟಿ ರಶ್ಮಿಕ, ರಕ್ಷಿತ್ ಶೆಟ್ಟಿ ಅವರಿಂದ ದೂರವಾದರೂ ಎಂದೂ, ರಶ್ಮಿಕಾಗೆ ವೇಣು ಸ್ವಾಮಿಯವರ ಜ್ಯೋತಿಷ್ಯದ ಮೇಲೆ ಬಹಳ ನಂಬಿಕೆ ಇದೆ ಎಂದು ಸುದ್ದಿಯಾಗಿತ್ತು.

ಇತ್ತೀಚಿಗಷ್ಟೇ ಮತ್ತೊಬ್ಬ ನಟಿ ನಿಧಿ ಅಗರವಾಲ್ ವೇಣು ಸ್ವಾಮಿಯವರಿಂದ ಪ್ರತ್ಯೇಕ ಪೂಜೆಗಳನ್ನು ಮಾಡಿಸಿದ ವಿಷಯ ಸುದ್ದಿಯಾದ ಬೆನ್ನಲ್ಲೇ, ತೆಲುಗು ಸಿನಿಮಾ ರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಕೂಡಾ ನನ್ನ ಕಸ್ಟಮರ್ ಎಂದು ವೇಣುಸ್ವಾಮಿ ಹೇಳಿದ ವಿಚಾರ ಸುದ್ದಿಯಾಗಿತ್ತು. ಈಗ ವೇಣು ಸ್ವಾಮಿ ಮತ್ತೊಂದು ಭವಿಷ್ಯವಾಣಿಯನ್ನು ನುಡಿದಿದ್ದು, ಇಬ್ಬರು ಹೀರೋಗಳು ಸಾಯುತ್ತಾರೆ ಎಂದು ಹೇಳಿರುವ ವಿಚಾರ ಸಂಚಲನ ಸೃಷ್ಟಿಸಿದೆ.

ಇದೇ ವೇಳೆ ಅವರು, ಒಬ್ಬ ನಟಿಯು ತೀವ್ರವಾದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ. ವೇಣುಸ್ವಾಮಿ ತೆಲುಗು ಸಿನಿಮಾ ರಂಗದ ಇಬ್ಬರು ನಟರು ಬೇರೆ ಬೇರೆ ಕಾರಣಗಳಿಂದ ಮರಣ ಹೊಂದುತ್ತಾರೆ, 2026ರ ವೇಳೆಗೆ ಮಿಥುನ ರಾಶಿ ಮತ್ತು ವೃಶ್ಚಿಕ ರಾಶಿ ಹೊಂದಿರುವ ಇಬ್ಬರು ಹೀರೋಗಳು ಸಾಯುತ್ತಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಇದೇ ವೇಳೆ ಅವರ ಸಾವಿಗೆ ಕಾರಣವಾಗುವ ವಿಚಾರ ಏನು ಎನ್ನುವುದನ್ನು ಸಹಾ ವೇಣು ಸ್ವಾಮಿ ಹೇಳಿದ್ದಾರೆ.

ಒಬ್ಬ ಹೀರೋ ಅನಾರೋಗ್ಯ ಸಮಸ್ಯೆಯಿಂದ ಸತ್ತರೆ, ಮತ್ತೊಬ್ಬರು ಆರ್ಥಿಕ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಅದೇ ರೀತಿ ಸ್ಟಾರ್ ಹೀರೋಯಿನ್ ಅನಾರೋಗ್ಯದಿಂದ ಬಹಳಷ್ಟು ತೊಂದರೆ ಅನುಭವಿಸುತ್ತಾರೆ ಎನ್ನುವ ಭವಿಷ್ಯವಾಣಿ ನುಡಿದಿದ್ದಾರೆ ವೇಣು ಸ್ವಾಮಿಮ ಈ ಭವಿಷ್ಯವಾಣಿಯನ್ನು ಕೇಳಿದ ನಂತರ ಅವರು ಸುಳಿವು ನೀಡಿರುವ ಇಬ್ಬರು ನಟರು ಯಾರು ಎನ್ನುವ ಚರ್ಚೆ ಪ್ರಾರಂಭವಾಗಿದೆ.

ವೇಣುಸ್ವಾಮಿ ಇತ್ತೀಚಿನ ದಿನಗಳಲ್ಲಿ ತಮ್ಮ ಭವಿಷ್ಯವಾಣಿಗಳಿಂದಲೇ ಸಂಚಲನ ಸೃಷ್ಟಿಸುತ್ತಿದ್ದಾರೆ. ಇವರು ನಾಗಚೈತನ್ಯ ಮತ್ತು ಸಮಂತಾ ವಿಚ್ಚೇದನ ಪಡೆಯುತ್ತಾರೆ ಎನ್ನುವ ವಿಚಾರವನ್ನು ಕೂಡ ಅವರು ಊಹಿಸಿ ಭವಿಷ್ಯವಾಣಿ ನುಡಿದಿದ್ದರು. ಇತ್ತೀಚಿಗಷ್ಟೇ ನಟ ಪ್ರಭಾಸ್ ಕುರಿತಾಗ ಭವಿಷ್ಯ ಹೇಳುತ್ತಾ. ಪ್ರಭಾಸ್ ದೊಡ್ಡ ಬಜೆಟ್ ಸಿನಿಮಾಗಳ ಬದಲಾಗಿ ಸಣ್ಣ ಸಿನಿಮಾಗಳನ್ನು ಒಪ್ಪಿಕೊಂಡರೆ ಯಶಸ್ಸು ಸಿಗುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದರು.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More