ಕೋರ್ಟ್ ನಲ್ಲಿ ನಟಿ ರಮ್ಯಾಗೆ ಸೋಲು: ಹಾಸ್ಟೆಲ್ ಹುಡುಗರಿಗೆ ಸಿಕ್ತು ಗೆಲುವು..

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ, ಈ ವರ್ಷ ಸೂಪರ್ ಹಿಟ್ ಆಗಬಹುದು ಎನ್ನುವ ಅಭಿಪ್ರಾಯವನ್ನು ಹುಟ್ಟು ಹಾಕಿದ್ದ, ಹೊಸಬರೆಲ್ಲರ ಒಂದು ವಿನೂತನ ಪ್ರಯತ್ನವಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಮುನ್ನವೇ ಇದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ನಟಿ ರಮ್ಯಾ ಅವರು ಸಿನಿಮಾದ ಬಿಡುಗಡೆಗೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ನಟಿ ರಮ್ಯಾ ತಮ್ಮ ಅನುಮತಿಯಿಲ್ಲದೇ ಟ್ರೈಲರ್ ನಲ್ಲಿ ತಮ್ಮ ದೃಶ್ಯಗಳನ್ನು ಬಳಸಲಾಗಿದೆ, ತನಗೆ ಒಂದು ಕೋಟಿ ರೂ ಪರಿಹಾರ ನೀಡಬೇಕೆಂದು ನಟಿ ಕೋರ್ಟ್ ಮೆಟ್ಟಿಲನ್ನು ಏರಿದ್ದರು. ಆದರೆ ಈಗ ಚಿತ್ರತಂಡಕ್ಕೆ ದೊಡ್ಡ ರಿಲೀಫ್ ದೊರೆತಿದೆ.
ಈಗ ಕೋರ್ಟ್ ನಲ್ಲಿ ಹಾಸ್ಟೆಲ್ ಹುಡುಗರು ಸಿನಿಮಾ ತಂಡಕ್ಕೆ ಜಯ ಸಿಕ್ಕಿದೆ. ನಟಿ ರಮ್ಯಾ ಅವರು ಕೋರಿದ್ದ ತಡೆಯಾಜ್ಞೆ ಕುರಿತಾಗಿ ವಿಚಾರಣೆ ನಡೆಸಿದ್ದು, ಸಿನಿಮಾ ನಿರ್ಮಾಪಕ ವರುಣ್ ಗೌಡ ಮತ್ತು ಇಡೀ ಹಾಸ್ಟೆಲ್ ಹುಡುಗರು ಕೋರ್ಟ್ ನಲ್ಲಿ ಹಾಜರಿದ್ದರು ಎನ್ನಲಾಗಿದೆ. ‌

ಕೋರ್ಟ್ ಈ ಸಿನಿಮಾ ಬಿಡುಗಡೆ ಮಾಡಲು ಅನುಮತಿ ನೀಡಿದೆ ಮತ್ತು ಯಾವುದೇ ದೃಶ್ಯಕ್ಕೂ ಕತ್ತರಿ ಹಾಕದೇ ಬಿಡುಗಡೆಗೆ ಅನುಮತಿ ನೀಡಿದೆ. ಕೋರ್ಟ್ ಈಗ ತನ್ನ ಆದೇಶದ ಮೂಲಕ ನಟಿ ರಮ್ಯಾ ಅವರ ಕೇಸನ್ನು ವಜಾ ಮಾಡಿ ಚಿತ್ರ ತಂಡಕ್ಕೆ ನಿರಾಳತೆ ನೀಡಿದೆ. ನಟಿ ರಮ್ಯಾ ಅವರು ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರಿಂದ ಸಿನಿಮಾ ಬಿಡುಗಡೆ ತಡವಾಗಬಹುದು ಎನ್ನುವ ಆತಂಕಕ್ಕೆ ಈಗ ತೆರೆ ಬಿದ್ದಿದೆ.‌

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More