ಚಿತ್ರರಂಗದಲ್ಲಿ ದಶಕಗಳಿಂದ ಸಾಧನೆ ಮಾಡಿದ ಅನೇಕ ಸಾಧಕರು ಇದ್ದಾರೆ, ಜನರ ಮನಸ್ಸನ್ನು ಗೆದ್ದಿದ್ದಾರೆ. ಅಂತಹವರಲ್ಲಿ ಸಿನಿಮಾ ರಂಗದ ದಂತಕಥೆಯಾಗಿ, ತಮ್ಮ ಸಂಗೀತದ ಮೂಲಕ ಕೋಟಿ ಕೋಟಿ ಜನರ ಮನಸ್ಸಿಗೆ ಹಾಡುಗಳ ಮೂಲಕ ಲಗ್ಗೆ ಇಟ್ಟಿರುವ, ಸ್ಯಾಂಡಲ್ವುಡ್ ನ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಹಂಸಲೇಖ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರುತ್ತಿದ್ದಾರೆ.

ಇಂದು ಹಂಸಲೇಖ ಅವರ ಜನ್ಮದಿನದ ಖುಷಿಯ ಸಂದರ್ಭದಲ್ಲಿ ಹಂಸಲೇಖ ಗರಡಿಯಲ್ಲಿ ಪಳಗಿರುವ ಕನ್ನಡ ಸಿನಿಮಾ ರಂಗದ ಪ್ರಸಿದ್ಧ ನಿರ್ದೇಶಕ ಶಶಾಂಕ್ ಅವರು ಒಂದು ವಿಶೇಷ ಮನವಿಯನ್ನು ಮಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಈ ವಿಚಾರವನ್ನು ಒತ್ತಾಯವನ್ನು ಮಾಡಿದ್ದಾರೆ. ಹಂಸಲೇಖ ಅವರ ಸಾಧನೆಗೆ ಅವರಿಗೆ ಈಗಾಗಲೇ ಭಾರತೀಯ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಸಿಗಬೇಕಾಗಿತ್ತು ಎನ್ನುವ ಮಾತನ್ನು ಹೇಳಿದ್ದಾರೆ.

ಹಂಸಲೇಖ ಅವರು ಸಂಗೀತ ನಿರ್ದೇಶಕರಾಗಿ, ಚಿತ್ರ ಸಾಹಿತಿಯಾಗಿ, ರಂಗಭೂಮಿ ಹಾಗೂ ಜನಪದ ಕ್ಷೇತ್ರಕ್ಕೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಸಿನಿಮಾ ಸಂಗೀತಕ್ಕೆ ಒಂದು ಹೊಸ ರೂಪವನ್ನು ನೀಡಿ, ಸಿನಿಮಾ ಸಂಗೀತದ ಗತಿಯನ್ನೇ ಬದಲಿಸಿದಂತಹ ಮಹಾನ್ ಸಂಗೀತ ನಿರ್ದೇಶಕರು ಹಂಸಲೇಖ. ಅವರು ಸಿನಿಮಾ ರಂಗಕ್ಕೆ ಸಾವಿರಾರು ಗಾಯಕರನ್ನು ಪರಿಚಯ ಮಾಡಿದ್ದಾರೆ. ಮಹಾನ್ ಸಂಗೀತ ನಿರ್ದೇಶಕ. ಆದರೂ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿಲ್ಲ.

ಬಾಲಿವುಡ್ ಗೆ ಹೋಲಿಕೆ ಮಾಡಿದಾಗ, ಬೇರೆ ಚಿತ್ರದ್ಯೋಮಗಳಿಗೆ ನಾಗರಿಕ ಪ್ರಶಸ್ತಿಗಳು ಬಂದಿರುವುದು ಕಡಿಮೆ. ಹಂಸಲೇಖ ಅವರು ಮಾಡಿರುವ ಕೆಲಸಕ್ಕೆ ಅವರಿಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಿಗಬೇಕಿತ್ತು. ಆದರೆ ಸಿಕ್ಕಿಲ್ಲ ಎನ್ನೋದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದ್ದು, ಇಂತಹುದೊಂದು ಬೇಸರವನ್ನು ಶಶಾಂಕ್ ಹಂಚಿಕೊಂಡಿದ್ದಾರೆ. ಹಂಸಲೇಖ ಅವರಿಗೆ ಪದ್ಮಶ್ರೀ ಸಿಗಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ ಕೂಡಾ ಆಗಿದೆ.