ತೆಲುಗಿನ ಸ್ಟಾರ್ ನಟ, ಸಕ್ರಿಯ ರಾಜಕಾರಣಿ ಸಹಾ ಆಗಿರುವ ನಟ ಪವನ್ ಕಲ್ಯಾಣ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಿನಿಮಾ ವಿಚಾರಗಳಿಗಿಂತಲೂ ಹೆಚ್ಚಾಗಿ ಸುದ್ದಿಯಾಗಿರುವುದು ರಾಜಕೀಯ ವಿಚಾರಗಳಿಗಾಗಿ. ಇದಲ್ಲದೇ ಆಗಾಗ ನಟನ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಒಂದಷ್ಟು ಸುದ್ದಿಗಳು ಯೂಟ್ಯೂಬ್ ಚಾನೆಲ್ ಗಳಲ್ಲಿ ಹಾಗೂ ಕೆಲವೊಂದು ಮಾದ್ಯಮ ಸುದ್ದಿಗಳಲ್ಲೂ ಸಹಾ ಹರಿದಾಡುತ್ತಲೇ ಇರುತ್ತದೆ. ಸದ್ಯಕ್ಕಂತೂ ನಟನ ಗಮನ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದೇ ಆಗಿದೆ.
ಪವನ್ ಕಲ್ಯಾಣ್ ಅವರ ಖಾಸಗಿ ಜೀವನದಲ್ಲಿ ಅವರ ಮೂರು ಮದುವೆಗಳ ವಿಚಾರ ಸಾಕಷ್ಟು ಬಾರಿ ಚರ್ಚೆಗೆ ಒಳಪಟ್ಟಿದೆ. ಅವರು ಮೊದಲು ನಂದಿನಿ ವಿಚ್ಚೇದನದ ನಂತರ ರೇಣು ದೇಸಾಯಿ ಅವರನ್ನು ಎರಡನೇ ವಿವಾಹವಾಗಿದ್ದರು. ರೇಣು ದೇಸಾಯಿ ನಂತರ ಪವನ್ ಕಲ್ಯಾಣ್ ಅನ್ನಾ ಲೆಜ್ನೇವಾ ಅವರ ಜೊತೆಗೆ ವಿಶೇಷ ಮದುವೆ ಕಾಯ್ದೆಯ ಅಡಿಯಲ್ಲಿ ವಿವಾಹವಾದರು. ಆದರೆ ಈಗ ಅವರ ಮೂರನೇ ಮದುವೆ ವಿಚಾರವಾಗಿ ಒಂದಷ್ಟು ಸುದ್ದಿಗಳು ಹರಿದಾಡಿವೆ.
ಹೌದು, ಇತ್ತೀಚಿಗೆ ಪವನ್ ಕಲ್ಯಾಣ್ ಅವರು ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಅಲ್ಲಿ ಅವರ ಮೂರನೇ ಪತ್ನಿ ಗೈರು ಹಾಜರಿ ಎದ್ದು ಕಾಣುತ್ತಿದೆ. ಶುಭ ಸಮಾರಂಭವೇ ಆಗಲೀ ಅಥವಾ ಬೇರೆ ಯಾವುದೇ ಕಾರ್ಯಕ್ರಮವಿರಲಿ ಅನ್ನ ಲೆಜ್ನೇವಾ ಅವರಾಗಲೀ, ಮಕ್ಕಳಾಗಲೀ ಕಾಣಿಸಿಕೊಳ್ಳುತ್ತಿಲ್ಲ. ಕೆಲವು ಸುದ್ದಿಗಳ ಪ್ರಕಾರ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಮಕ್ಕಳೊಂದಿಗೆ ರಷ್ಯಾಕ್ಕೆ ವಾಪಸಾಗಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಡಿದೆ.
ಈ ಬೆಳವಣಿಗೆಗಳನ್ನು ಕಂಡು ಪವನ್ ಕಲ್ಯಾಣ್ ಮೂರನೇ ಪತ್ನಿಯನ್ನು ತೊರೆಯಲಿದ್ದಾರಾ? ಎನ್ನುವ ಪ್ರಶ್ನೆಯೊಂದು ಮೂಡಿದೆ. ಆದರೆ ಇದೇ ವೇಳೆ ಅವರ ನಡುವೆ ಎಲ್ಲವೂ ಸರಿಯಾಗಿದೆ. ಆದರೆ ಕೆಲವೊಂದು ಯೂಟ್ಯೂಬ್ ಚಾನೆಲ್ ಗಳು ಇಂತಹ ಸುಳ್ಳು ಸುದ್ದಿ ಹಬ್ಬಿಸಿದೆ ಅದನ್ನು ನಂಬಬೇಡಿ , ಅದು ಫೇಕ್ ಸುದ್ದಿ ಎಂದು ಸ್ಪಷ್ಟನೆ ನೀಡುವ ಪ್ರಯತ್ನಗಳನ್ನು ಸಹಾ ಮಾಡಲಾಗುತ್ತಿದೆ. ಆದರೂ ಸದ್ಯಕ್ಕಂತೂ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.