ಒಂದು ಜಾಹೀರಾತಿಗಾಗಿ ರಾಜಮೌಳಿ ಪಡೆದ ಸಂಭಾವನೆ ಇಷ್ಟೊಂದಾ? ಸ್ಟಾರ್ ನಟರನ್ನೂ ಮೀರಿಸಿದ ನಿರ್ದೇಶಕ !

ದಕ್ಷಿಣ ಸಿನಿಮಾ ರಂಗದ ದಿಗ್ಗಜ ನಿರ್ದೇಶಕ ರಾಜ ಮೌಳಿ ತ್ರಿಬಲ್ ಆರ್ ಸಿನಿಮಾದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮತ್ತು ಯಶಸ್ಸು ಎರಡನ್ನೂ ಪಡೆದುಕೊಂಡಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ಪಡೆದ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಸಿಗುವಷ್ಟೇ ಜನಪ್ರಿಯತೆಯು ಇತ್ತೀಚಿನ ವರ್ಷಗಳಲ್ಲಿ ರಾಜ ಮೌಳಿ ಅವರಿಗೂ ಕೂಡಾ ದಕ್ಕಿದೆ. ಅವರ ಈ ಜನಪ್ರಿಯತೆಯಿಂದಾಗಿ ಅವರಿಗೆ ಜಾಹೀರಾತುಗಳಲ್ಲಿ ನಟಿಸುವ, ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಆಗುವ ಅವಕಾಶಗಳು ಕೂಡಾ ಅರಸಿ ಬರುತ್ತಿದೆ.

ಕೇವಲ ಸ್ಟಾರ್ ನಟ ನಟಿಯರಿಗೆ ಸಿಗುತ್ತಿದ್ದಂತಹ ಬ್ರಾಂಡ್ ಅಂಬಾಸಿಡರ್ ಅವಕಾಶ ಇದೀಗ ನಿರ್ದೇಶಕರಿಗೂ ಸಿಗುತ್ತಿದೆ. ಅದರ ಭಾಗವಾಗಿಯೇ ರಾಜ ಮೌಳಿ ಒಂದು ಸುಪ್ರಸಿದ್ಧ ಮೊಬೈಲ್ ಫೋನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ರಾಜ ಮೌಳಿಯವರು ಜನಪ್ರಿಯ ಫೋನ್ ಬ್ರಾಂಡ್ ಆಗಿರುವ ಒಪ್ಪೋ ಗೆ ಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದು, ಜಾಹೀರಾತಿನಲ್ಲಿ ನಟಿಸಿದ್ದು, ಅದರ ವೀಡಿಯೋ ತುಣುಕು ಬಿಡುಗಡೆಯಾಗಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು

ಈಗ ರಾಜಮೌಳಿ ಮೊಬೈಲ್ ಫೋನ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಪಡೆದಿರುವ ಸಂಭಾವನೆ ಎಷ್ಟು ಎನ್ನುವ ವಿಚಾರ ಒಂದು ಸುದ್ದಿಯಾಗಿದ್ದು ಎಲ್ಲರಿಗೂ ಸಹಾ ಆಚ್ಚರಿಯನ್ನು ಮೂಡಿಸುತ್ತಿದೆ. ಹೌದು ರಾಜಮೌಳಿ ಅವರು ಇದೊಂದು ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಬರೋಬ್ಬರಿ ಮೂರು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಗಳಿವೆ ಎಂದು ಕೂಡಾ ಹೇಳಲಾಗುತ್ತಿದೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More