ಕಾಟೇರ ಸಿನಿಮಾದ ಹೊಸ ಅಪ್ಡೇಟ್: ಮಣ್ಣಿನ ಕಥೆ ಹೇಳುವ ಮನೋಜ್ಞ ಸಿನಿಮಾ

ಕನ್ನಡ ಸಿನಿಮಾಗಳ ವ್ಯಾಪ್ತಿ ಇಂದು ಹಿಂದಿನಂತಿಲ್ಲ. ಅಲ್ಲದೇ ಕನ್ನಡದಲ್ಲಿ ಹೊಸ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವ ಮೂಲಕ ದೇಶ ಮಾತ್ರವೇ ಅಲ್ಲದೇ ವಿಶ್ವದ ಗಮನವನ್ನು ಸಹಾ ಸೆಳೆಯುತ್ತಿದೆ ಸ್ಯಾಂಡಲ್ವುಡ್. ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಸಿನಿಮಾ ಸಿನಿ ಪ್ರೇಮಿಗಳಿಗೆ ಬೆರಗು ಮೂಡಿಸಲು ಮುಂದಾಗಿದೆ. ಸ್ಯಾಂಡಲ್‌ವುಡ್‌ ನಿಂದ ಮತ್ತೊಂದು ಹೊಸ ಪ್ರಯೋಗ ನಡೆದಿದ್ದು, ಅದರ ಫಲವಾಗಿದೆ ಕಾಟೇರ (Katera) ಸಿನಿಮಾ.

ಈ ಸಿನಿಮಾದಲ್ಲಿ ಮೂಡಿ ಬಂದಿರುವ 70-80 ರ ದಶಕದ ಚಿತ್ರಣ ವಿಶೇಷವಾಗಿರಲಿದೆ. 1973 ರಲ್ಲಿ ಬಂದ ಒಂದು ಕಾಯಿದೆಯ ಪರಿಣಾಮಗಳು ಏನಾಗಿತ್ತು, ಅಂದು ಅದರಿಂದ ಹೇಗೆ ಪರಿಸ್ಥಿತಿ ಬದಲಾಗಿತ್ತು ನಂತರದ ದಿನಗಳಲ್ಲಿ ಏನಾಯ್ತು ಅನ್ನೋದನ್ನು ಸೂಕ್ಷ್ಮವಾಗಿ ತಿಳಿಸುವ ಸಿನಿಮಾ ಕಾಟೇರ.. ತರುಣ್ ಸಧೀರ್ ಸೃಷ್ಟಿಸಿರುವ ಈ ದೃಶ್ಯ ಕಾವ್ಯವು ರಾಕ್‌ಲೈನ್ ವೆಂಕಟೇಶ್ (Rock Line Venkatesh) ಅದ್ಧೂರಿ ನಿರ್ಮಾಣದಲ್ಲಿ ತಯಾರಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಅಭಿನಯದ 56 ನೇ ಸಿನಿಮಾ ಇದಾಗಿದೆ. ದರ್ಶನ್ ಈ ಬಾರಿ ತಮ್ಮ ಅಭಿಮಾನಿಗಳ ಮುಂದೆ ಕಾಟೇರನಾಗಿ ಬರುತ್ತಿದ್ದಾರೆ. ಅವರ ಒಂದು ಮಾಸ್ ಲುಕ್ ಈಗಾಗಲೇ ಮಾಸ್ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಹಿಂದಿನ 55 ಸಿನಿಮಾಗಳಲ್ಲಿ ದರ್ಶನ್ ಕಾಣಿಸಸಿಕೊಂಡಿದ್ದಕ್ಕೂ, ಈಗ ಅವರು ಕಾಣಿಸಿಕೊಳ್ಳುತ್ತಿರುವುದಕ್ಕೆ ಬಹಳ ವ್ಯತ್ಯಾಸ ಇದೆ.

ಕಾಟೇರ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾದಲ್ಲಿ ಭರ್ಜರಿ ಮಾಸ್ ಎಲಿಮೆಂಟ್ಸ್ ಗಳಿದ್ದು, ಕಾಟೇರ ಸಿನಿಮಾದ ಚಿತ್ರೀಕರಣ 90ರಷ್ಟು ಮುಕ್ತಾಯವಾಗಿದೆ ಎನ್ನಲಾಗಿದೆ. ಸಿನಿಮಾದ ಹಾಡುಗಳ ಚಿತ್ರೀಕರಣ, ಒಂದಷ್ಟು ಫೈಟ್ ಸೀನ್ ಬಾಕಿ ಇದೆ. ಈ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.

Related posts

ಸ್ಮೈಲ್ ಕೊಟ್ಳು ಸೂಜಿಮಲ್ಲಿ, ಸಿಗ್ನಲ್ ಕೊಟ್ಳಲು ಕಣ್ಣಿನಲ್ಲಿ.. ವೈರಲ್ ಆಗ್ತಿದೆ “ಠಾಣೆ” ಫಿಲಂ ಸಾಂಗ್.

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

This website uses cookies to improve your experience. We'll assume you're ok with this, but you can opt-out if you wish. Read More