ಅಕ್ಷಯ್ ಕುಮಾರ್ ಸಿನಿಮಾ OMG 2 ಬಿಡುಗಡೆಗೆ ತಡೆ ಹಾಕಿದ ಸೆನ್ಸಾರ್: ಶಾಕ್ ಆದ ಅಭಿಮಾನಿಗಳು

ಇತ್ತೀಚಿನ ಸಿನಿಮಾಗಳಲ್ಲಿ ಹಿಂದೂ ದೇವರುಗಳು ಮತ್ತು ಸಂಪ್ರದಾಯ, ಆಚರಣೆಗಳ ಕುರಿತಾದ ವಿಚಾರಗಳಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಲಾಗುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಲೇ ಇದೆ.. ಕೆಲವೇ ದಿನಗಳ ಹಿಂದೆಯಷ್ಟೇ ಆದಿಪುರುಷ ಸಿನಿಮಾ ಎಬ್ಬಿಸಿದ ವಿವಾದ ಇನ್ನೂ ಜನರು ಮರೆತಿಲ್ಲ.. ಅಲ್ಲದೇ ಸೆನ್ಸಾರ್ ಬೋರ್ಡ್ ಇಂತಹ ಸಿನಿಮಾಗಳಿಗೆ ಹೇಗೆ ಅನುಮತಿ ನೀಡುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಸಹಾ ಪ್ರಶ್ನೆ ಮಾಡಿತ್ತು.

ಈಗ ಇವೆಲ್ಲವುಗಳ ನಡುವೆಯೇ ದೇವರು ಮತ್ತು ಭಕ್ತನ ನಡುವಿನ ಒಂದು ವಿಶೇಷ ಬಾಂಧವ್ಯವನ್ನು ತೋರಿಸುವ ‘ಓ ಮೈ ಗಾಡ್’ ಚಿತ್ರದ ಎರಡನೇ ಅವತರಣಿಕೆಯಾಗಿ ಹಿಂದಿಯಲ್ಲಿ OMG 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಇದೇ ವೇಳೆ ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಸಮಸ್ಯೆ ಎದುರಿಸಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಿನಿಮಾದ ಕುರಿತಾಗಿ ಒಂದು ಮಹತ್ವದ ಸುದ್ದಿ ಹೊರ ಬಂದಿದೆ.

ವರದಿಗಳ ಪ್ರಕಾರ, ಈ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರವನ್ನು ನೀಡಲು ನಿರಾಕರಣೆ ಮಾಡಿದೆ ಮತ್ತು ಸದ್ಯಕ್ಕೆ ಸಿನಿಮಾವನ್ನು ವಿಮರ್ಶಾ ಸಮಿತಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಲವೇ ದಿನಗಳ ಹಿಂದೆಯಷ್ಟೇ ನಿರ್ಮಾಪಕರು ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದರು. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ, ಪಂಕಜ್ ತ್ರಿಪಾಠಿ ಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More