ಬುರ್ಖಾ ಇಲ್ಲದಿದ್ರೆ ಬಸ್ ಹತ್ಸಲ್ಲ: ದರ್ಪ ಮೆರೆದ ಕೆಕೆಆರ್ಟಿಸಿ ಬಸ್ ಚಾಲಕ ಅಮಾನತ್ತು

ಬುರ್ಖಾ ಧರಿಸಿ ಬಸ್ ಹತ್ತುಬೇಕೆಂದು ಹೇಳಿ, ವಿದ್ಯಾರ್ಥಿನಿಯರಿಗೆ ಒತ್ತಾಯವನ್ನು ಮಾಡಿದ್ದ ಆರೋಪವೊಂದು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಬಸ್ ಚಾಲಕನನ್ನು ಅಮಾನತು ಮಾಡಲಾಗಿರುವ ಘಟನೆಯೊಂದು ನಡೆದಿದೆ. ಹೌದು, ಮಂಗಳವಾರದಂದು ಈ ಘಟನೆ ನಡೆದಿದ್ದು, ಅಂದು ಕಲಬುರಗಿ ಬಸವಕಲ್ಯಾಣ ಮಾರ್ಗದ ಕಮಲಾಪುರ ಬಸ್ ನಿಲ್ದಾಣದಲ್ಲಿ ಈ ಘಟನೆಯು ವರದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಸಹಾ ವೈರಲ್ ಆಗುತ್ತಿದೆ. ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಂದಾದ ವಿದ್ಯಾರ್ಥಿನಿಯರಿಗೆ, ಚಾಲಕನು ಬುರ್ಖಾ ಧರಿಸಿ ಬಸ್ ಹತ್ತುವಂತೆ ಚಾಲಕ ಒತ್ತಾಯ ಮಾಡಿದ್ದಾನೆ.

ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು. ಶಾಲಾ ವಿದ್ಯಾರ್ಥಿನಿಯೊಬ್ಬಳು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತುವ ವೇಳೆಯಲ್ಲಿ ಬಸ್ ಚಾಲಕನು ವಿದ್ಯಾರ್ಥಿನಯನ್ನು ನಿಂದನೆ ಮಾಡಿದ್ದಾನೆ. ಆತ ವಿದ್ಯಾರ್ಥಿನಿ ಬಸ್​ ಹತ್ತಿದ್ದ ಕೂಡಲೇ ಆಕೆಯನ್ನು ಅಡ್ಡಪಡಿಸಿದ್ದು ಮಾತ್ರವೇ ಅಲ್ಲದೇ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಬುರ್ಖಾ ಧರಿಸಿ ಬಾ ಎಂದು ಹೇಳಿದ್ದಲ್ಲದೇ ಹಾಗೆ ಬಂದರೆ ಮಾತ್ರ ಬಸ್ ಹತ್ತಲು ಬಿಡುತ್ತೇನೆ ಹೇಳಿ ಬಸ್‌ನಿಂದ ಕೆಳಗಿಳಿಸಿದ್ದಾನೆ.

ಈ ಮೂಲಕ ಚಾಲಕ ದರ್ಪವನ್ನು ತೋರಿಸಿದ್ದಾನೆ. ಈ ಘಟನೆಯ ವೀಡಿಯೋವನ್ನು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಶಿಕ್ಷಕರೊಬ್ಬರು ರೆಕಾರ್ಡ್ ಮಾಡಿದ್ದರು ಎನ್ನಲಾಗಿದ್ದು, ಈ ವೀಡಿಯೋ ವೈರಲ್ ಆದ ಮೇಲೆ ಚಾಲಕನ ವರ್ತನೆಯ ಕುರಿತಾಗಿ ಅನೇಕರು ಅಸಮಾಧಾನ ಹೊರ ಹಾಕಿದ್ದರು. ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಕೆಕೆಆರ್‌ಟಿಸಿ, ಬುಧವಾರ ಮತ್ತು ಗುರುವಾರದಂದು ಈ ವಿಚಾರವಾಗಿ ಪ್ರಾಥಮಿಕ ವಿಚಾರಣೆಯನ್ನು ನಡೆಸಿದೆ.

ವಿಚಾರಣೆಯ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಂತು ಬಸ್ ಚಾಲಕ ಮಹೆಬೂಬಸಾಬ್ ಮತ್ತು ಬಾಲಕಿಯ ಹೇಳಿಕೆಯನ್ನು ವಿಚಾರಿಸಲಾಗಿದ್ದು, ಈ ವೇಳೆ ಚಾಲಕ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವ ಕಾರಣ ಚಾಲಕ ಮೆಹಬೂಬ್ ಸಾಬ್ ಅವರನ್ನು ಅಧಿಕಾರಿಗಳು ಅಮಾನತ್ತುಗೊಳಿದ್ದಾರೆ ಎನ್ನಲಾಗಿದೆ. ‌

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More