Home » ಟಿಪ್ಪು ಸಿನಿಮಾ ಮಾಡೋದಿಲ್ಲ, ಸಿನಿಮಾ ಘೋಷಿಸಿದ ಎರಡೇ ತಿಂಗಳಲ್ಲಿ ನಿರ್ಮಾಪಕ ಇಂತ ನಿರ್ಧಾರ ಮಾಡಿದ್ದೇಕೆ?

ಟಿಪ್ಪು ಸಿನಿಮಾ ಮಾಡೋದಿಲ್ಲ, ಸಿನಿಮಾ ಘೋಷಿಸಿದ ಎರಡೇ ತಿಂಗಳಲ್ಲಿ ನಿರ್ಮಾಪಕ ಇಂತ ನಿರ್ಧಾರ ಮಾಡಿದ್ದೇಕೆ?

by Suddi Mane
0 comment

ಕಳೆದ ಮೇ ತಿಂಗಳಿನಲ್ಲಿ ನಿರ್ಮಾಪಕ ಸಂದೀಪ್ ಸಿಂಗ್ ಮಾಡಿದ ಒಂದು ಘೋಷಣೆ ಎಲ್ಲರಿಗೂ ಅಚ್ಚರಿಯನ್ನು ನೀಡಿತ್ತು. ನಿರ್ಮಾಪಕ ಸಂದೀಪ್‌ ಸಿಂಗ್‌ ಅವರು ತಾನು ʼಟಿಪ್ಪು ಸುಲ್ತಾನ್‌ʼ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದರು. ಆದರೆ ಈಗ ಈ ವಿಚಾರವಾಗಿ ಹೊಸ ಸುದ್ದಿಯೊಂದು ಹೊರಗೆ ಬಂದಿದ್ದು, ಸಂದೀಪ್ ಸಿಂಗ್ ಅವರು ಇದೀಗ ಎರಡು ತಿಂಗಳ ಬಂತರ ತಾನು ಈ ಸಿನಿಮಾವನ್ನು ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ವೀರ ಸಾವರ್ಕರ್ ಹಾಗೂ ಅಟಲ್‌, ಬಾಲ್  ಶಿವಾಜಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವಂತಹ ಸಂದೀಪ್‌ ಶರ್ಮಾ ಅವರು , ಇರೋಸ್‌ ಇಂಟರ್‌ ನ್ಯಾಷನಲ್‌ ನೊಂದಿಗೆ ಸೇರಿಕೊಂಡು ಟಿಪ್ಪು ಸಿನಿಮಾವನ್ನು ನಿರ್ಮಾಣವನ್ನು ಮಾಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಈ ವಿಚಾರವಾಗಿ ಮೋಷನ್ ಪಿಕ್ಚರ್ ಕೂಡಾ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಮತಾಂಧ ಸುಲ್ತಾನ್‌ ಎಂದು ʼಟಿಪ್ಪುʼವಿನ ಮುಖಕ್ಕೆ ಮಸಿ ಬಳಿದಿರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿತ್ತು.

ಅಲ್ಲದೇ ಈ ಮೋಷನ್ ಪಿಕ್ಚರ್ ನಲ್ಲಿ 8 ಸಾವಿರ ದೇವಾಲಯಗಳನ್ನು, 27 ಚರ್ಚ್‌ ಗಳನ್ನು ನಾಶ ಮಾಡಲಾಗಿದೆ. 4 ಮಿಲಿಯನ್‌ ಹಿಂದೂಗಳನ್ನು ಮತಾಂತರ ಮಾಡಿ, ಬಲವಂತವಾಗಿ ಗೋಮಾಂಸವನ್ನು ಸೇವಿಸಲು ಒತ್ತಾಯಿಸಲಾಗಿತ್ತು. 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಹಾಕಿ ಶಿಕ್ಷಿಸಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಬ್ರಾಹ್ಮಣ ಕುಟುಂಬಕ್ಕೆ ಹಿಂಸೆ ನೀಡಲಾಗಿತ್ತು, ಆತನ ದುರಾಡಳಿತ 1783 ರಿಂದ ಆರಂಭವಾಯಿತು ಎಂದೆಲ್ಲಾ ಹೇಳಲಾಗಿತ್ತು.

ಈ ಸಿನಿಮಾ ಘೋಷಣೆ ಮಾಡಿದ ನಂತರ ಸಿನಿಮಾ ವಿಚಾರವಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ ಅನೇಕರಿಂದ ಸಿನಿಮಾ ನಿರ್ಮಾಣದ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದವು. ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಇದೀಗ ಎರಡು ತಿಂಗಳ ನಂತರ ನಿರ್ಮಾಪಕರು ಸಿನಿಮಾವನ್ನು ಮಾಡುವುದಿಲ್ಲ ಎಂದು ಘೋಷಣೆಯನ್ನು ಮಾಡಿದ್ದಾರೆ. ಈ ಸುದ್ದಿ ಅನೇಕರಿಗೆ ಶಾಕ್ ನೀಡಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies