ಟಿಪ್ಪು ಸಿನಿಮಾ ಮಾಡೋದಿಲ್ಲ, ಸಿನಿಮಾ ಘೋಷಿಸಿದ ಎರಡೇ ತಿಂಗಳಲ್ಲಿ ನಿರ್ಮಾಪಕ ಇಂತ ನಿರ್ಧಾರ ಮಾಡಿದ್ದೇಕೆ?

ಕಳೆದ ಮೇ ತಿಂಗಳಿನಲ್ಲಿ ನಿರ್ಮಾಪಕ ಸಂದೀಪ್ ಸಿಂಗ್ ಮಾಡಿದ ಒಂದು ಘೋಷಣೆ ಎಲ್ಲರಿಗೂ ಅಚ್ಚರಿಯನ್ನು ನೀಡಿತ್ತು. ನಿರ್ಮಾಪಕ ಸಂದೀಪ್‌ ಸಿಂಗ್‌ ಅವರು ತಾನು ʼಟಿಪ್ಪು ಸುಲ್ತಾನ್‌ʼ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದರು. ಆದರೆ ಈಗ ಈ ವಿಚಾರವಾಗಿ ಹೊಸ ಸುದ್ದಿಯೊಂದು ಹೊರಗೆ ಬಂದಿದ್ದು, ಸಂದೀಪ್ ಸಿಂಗ್ ಅವರು ಇದೀಗ ಎರಡು ತಿಂಗಳ ಬಂತರ ತಾನು ಈ ಸಿನಿಮಾವನ್ನು ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ವೀರ ಸಾವರ್ಕರ್ ಹಾಗೂ ಅಟಲ್‌, ಬಾಲ್  ಶಿವಾಜಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವಂತಹ ಸಂದೀಪ್‌ ಶರ್ಮಾ ಅವರು , ಇರೋಸ್‌ ಇಂಟರ್‌ ನ್ಯಾಷನಲ್‌ ನೊಂದಿಗೆ ಸೇರಿಕೊಂಡು ಟಿಪ್ಪು ಸಿನಿಮಾವನ್ನು ನಿರ್ಮಾಣವನ್ನು ಮಾಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ.

ಈ ವಿಚಾರವಾಗಿ ಮೋಷನ್ ಪಿಕ್ಚರ್ ಕೂಡಾ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಮತಾಂಧ ಸುಲ್ತಾನ್‌ ಎಂದು ʼಟಿಪ್ಪುʼವಿನ ಮುಖಕ್ಕೆ ಮಸಿ ಬಳಿದಿರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿತ್ತು.ಅಲ್ಲದೇ ಈ ಮೋಷನ್ ಪಿಕ್ಚರ್ ನಲ್ಲಿ 8 ಸಾವಿರ ದೇವಾಲಯಗಳನ್ನು, 27 ಚರ್ಚ್‌ ಗಳನ್ನು ನಾಶ ಮಾಡಲಾಗಿದೆ. 4 ಮಿಲಿಯನ್‌ ಹಿಂದೂಗಳನ್ನು ಮತಾಂತರ ಮಾಡಿ, ಬಲವಂತವಾಗಿ ಗೋಮಾಂಸವನ್ನು ಸೇವಿಸಲು ಒತ್ತಾಯಿಸಲಾಗಿತ್ತು. 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಹಾಕಿ ಶಿಕ್ಷಿಸಿದ್ದಾರೆ.

ಎರಡು ಸಾವಿರಕ್ಕೂ ಅಧಿಕ ಬ್ರಾಹ್ಮಣ ಕುಟುಂಬಕ್ಕೆ ಹಿಂಸೆ ನೀಡಲಾಗಿತ್ತು, ಆತನ ದುರಾಡಳಿತ 1783 ರಿಂದ ಆರಂಭವಾಯಿತು ಎಂದೆಲ್ಲಾ ಹೇಳಲಾಗಿತ್ತು.ಈ ಸಿನಿಮಾ ಘೋಷಣೆ ಮಾಡಿದ ನಂತರ ಸಿನಿಮಾ ವಿಚಾರವಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ ಅನೇಕರಿಂದ ಸಿನಿಮಾ ನಿರ್ಮಾಣದ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದವು. ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಇದೀಗ ಎರಡು ತಿಂಗಳ ನಂತರ ನಿರ್ಮಾಪಕರು ಸಿನಿಮಾವನ್ನು ಮಾಡುವುದಿಲ್ಲ ಎಂದು ಘೋಷಣೆಯನ್ನು ಮಾಡಿದ್ದಾರೆ. ಈ ಸುದ್ದಿ ಅನೇಕರಿಗೆ ಶಾಕ್ ನೀಡಿದೆ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More