ಭಿಕ್ಷುಕ ಅನ್ನೋ ಪದ ಕೇಳಿದಾಗ ನಮ್ಮ ಆಲೋಚನೆಗಳಲ್ಲಿ ಒಬ್ಬ ನಿರ್ಗತಿಕನ ಚಿತ್ರಣ ಮೂಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಕುಳಿತು ಜನರ ಬಳಿ ಹಣ ಬೇಡುವ ಅಸಹಾಯಕರು ನಮಗೆ ಕಾಣಿಸುತ್ತಾರೆ. ಅಲ್ಲದೇ ಭಿಕ್ಷುಕ ಎಂದರೆ ಜನರು ಸಹಾ ಬಹಳ ಅಸಡ್ಡೆಯಿಂದ ನೋಡುವುದು ಸಹಾ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕೆಲವರಿಗೆ ಭಿಕ್ಷಾಟನೆ ಮಾಡುವುದೇ ಒಂದು ವೃತ್ತಿ ಎಂದರೆ ಅಚ್ಚರಿಯಾಗಬಹುದು ಹಾಗೂ ಇದರಿಂದಲೇ ಅವರು ಕೋಟಿಗಳಷ್ಟು ಹಣ ಗಳಿಸಿದ್ದಾರೆ ಎಂದರೆ ಶಾಕ್ ಆಗಬಹುದು.
ಈಗ ಹೊರ ಬಂದಿರುವ ಸುದ್ದಿಗಳು ಹಾಗೂ ವರದಿಗಳ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದಲ್ಲಿ ಇದ್ದಾನೆ ಎನ್ನುವುದಾಗಿದೆ. ಹೌದು, ಭರತ್ ಜೈನ್ ಹೆಸರಿನ ವ್ಯಕ್ತಿಯು ಈಗ ಜಾಗತಿಕ ಮಟ್ಟದಲ್ಲಿ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾರೆ ಎನ್ನಲಾಗಿದೆ. ಈತ ಮುಂಬೈ ಮಹಾನಗರದ ಬೀದಿಗಳಲ್ಲಿ ಭಿಕ್ಷೆ ಯನ್ನು ಬೇಡುತ್ತಾರೆ. ಭರತ್ ಜೈನ್ ಭಿಕ್ಷಾಟನೆಯ ಮೂಲಕವೇ ಕೋಟಿಗಳ ಮೊತ್ತದಲ್ಲಿ ಹಣ ಗಳಿಸಿದ್ದಾರೆ.
ಮುಂಬೈ ಮೂಲದ ಭರತ್ ಜೈನ್ ಅವರು ಪ್ರಸ್ತುತ 7.5 ಕೋಟಿ ಅಥವಾ 1 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಗಳಿಸಿದ್ದಾರೆ. ಕೇವಲ ಭಿಕ್ಷಾಟನೆಯಿಂದ ಅವರ ತಿಂಗಳ ಆದಾಯವು 60,000 ರೂ.ಗಳಿಂದ 75,000 ರೂ ಗಳಾಗಿದೆ ಎನ್ನಲಾಗಿದೆ. ಇವರ ಬಳಿ 1.2 ಕೋಟಿ ಮೌಲ್ಯದ ಎರಡು ಬೆಡ್ ರೂಂ ಫ್ಲಾಟ್ ಗಳಿವೆ. ಥಾಣೆಯಲ್ಲಿ ಎರಡು ಅಂಗಡಿಗಳನ್ನು ಬಾಡಿಗೆಗೆ ನೀಡಿದ್ದು ಮಾಸಿಕ 30 ಸಾವಿರ ರೂ.ಗಳ ಬಾಡಿಗೆಯನ್ನು ಪಡೆಯುತ್ತಾರೆ.
ಭರತ್ ಜೈನ್ ಎಷ್ಟೇ ಸಂಪಾದನೆ ಮಾಡಿದ್ರು ಸಹಾ ಭಿಕ್ಷಾಟನೆ ಮಾಡುವುದನ್ನು ಮಾತ್ರ ನಿಲ್ಲಸಿಲ್ಲ. ಇಂದು ಸಹಾ ಅವರು ಮುಂಬೈನಲ್ಲಿ ಭಿಕ್ಷೆ ಬೇಡುತ್ತಾರೆ. ಭರತ್ ಜೈನ್ ದಿನವೊಂದಕ್ಕೆ 2 ರಿಂದ 2.5 ಸಾವಿರ ರೂ. ವರೆಗೆ ಗಳಿಕೆಯನ್ನು ಮಾಡುತ್ತಾರೆ. ಅವರ ಕುಟುಂಬದವರು ಒಂದು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಾರೆ. ಇದು ಅವರ ಆದಾಯದ ಮತ್ತೊಂದು ಮೂಲವಾಗಿದೆ ಎಂದು ತಿಳಿದು ಬಂದಿದೆ.