ಸ್ಯಾಂಡಲ್ವುಡ್ ನಟಿ ಎರಡನೇ ಸಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಂಗೀತ ಭಟ್ ಅವರು ತಮ್ಮ 31ನೇ ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ. ಈ ವೇಳೆ ಪತ್ನಿ ಸಂಗೀತ ಅವರಿಗೆ ಅವರ ಪತಿ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಸುದರ್ಶನ್ ಅವರು ಜನ್ಮದಿನದ ಶುಭಾಶಯಗಳು ಹೇಳುವುದರ ಜೊತೆಗೆ ಪತ್ನಿಯ ಕಾಲೆಳೆದಿದ್ದಾರೆ. ನಟ ತಮ್ಮ ಪತ್ನಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯಗಳನ್ನು ಹೇಳಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರ ವಿಶೇಷ ಗಮನವನ್ನು ಸೆಳೆಯುತ್ತಿದೆ..
ಸಂಗೀತ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಅವರು ಎರಡನೇ ಸಲ, ಅನುಕ್ತ, ಆದ್ಯ, ರೂಪಾಂತರ ದಯವಿಟ್ಟು ಗಮನಿಸಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಒಂದಷ್ಟು ಸಮಯದಿಂದ ಸಿನಿಮಾಗಳಿಂದ ವಿರಾಮವನ್ನು ಪಡೆದುಕೊಂಡಿದ್ದ ನಟಿ ಈಗ ಅಬ ಜಬ ದಬ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ.
ನಟಿಯ ಜನ್ಮದಿನದ ಹಿನ್ನೆಲೆಯಲ್ಲಿ ಸುದರ್ಶನ್ ಅವರು ತಮ್ಮ ಪತ್ನಿಗೆ ಜನ್ಮದಿನದ ಶುಭಾಶಯಗಳು ಹೇಳುತ್ತಾ, ನಿನಗೆ ಈಗ 31 ವರ್ಷ ಅಂತ ನಾನು ಯಾರಿಗೂ ಹೇಳೋದಿಲ್ಲ. ನೀನು ಆಂಟಿಯಾಗಿ ಒಂದು ವರ್ಷ ಅನುಭವ ಇದೆ ಎಂದು ವಿಶ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟಿ, ನಿನ್ನ ಏಜ್ ಹೇಳ್ಳಾ ಇಲ್ಲಿ ಎಂದು ಪತಿಗೆ ಉತ್ತರಿಸಿದ್ದಾರೆ. ಸಂಗೀತ ಭಟ್ ಮತ್ತು ಸುದರ್ಶನವರು ಪ್ರೀತಿಸಿ, ತಮ್ಮ ಕುಟುಂಬಗಳಿಂದ ಸಮ್ಮತಿಯನ್ನು ಪಡೆದು ಮದುವೆಯಾದ ಜೋಡಿಯಾಗಿದ್ದಾರೆ.