ಆದಿಪುರುಷ್ ಬ್ಯಾನ್ ಬಗ್ಗೆ ಕೋರ್ಟ್ ಹೇಳಿದ್ದೇನು? ಚಿತ್ರ ತಂಡಕ್ಕೆ ಸಿಕ್ತು ಬಿಗ್ ರಿಲೀಫ್

ಪ್ರಭಾಸ್ ನಾಯಕನಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಮ ಆದಿಪುರುಷ ಸಿನಿಮಾ ಬಿಡುಗಡೆಯ ನಂತರ ಎದ್ದಿರುವ ಚರ್ಚೆಗಳು, ವಿವಾದಗಳ ಬೆನ್ನಲ್ಲೆ ಈ ಸಿನಿಮಾವನ್ನು ಇಡೀ ದೇಶದಲ್ಲಿ ಬ್ಯಾನ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದವು. ಅಲ್ಲದೇ ಸಿನಿಮಾ ಬ್ಯಾನ್ ಕುರಿತಾಗಿ ಆದಷ್ಟು ಬೇಗ ಕೋರ್ಟ್ ಕ್ರಮ ಜರುಗಿಸಬೇಕೆಂದು ಮನವಿಯನ್ನು ಸಹಾ ಮಾಡಲಾಗಿತ್ತು. ಕೋರ್ಟ್ ನಿನ್ನೆ ಈ ವಿಚಾರವಾಗಿ ವಿಚಾರಣೆಯನ್ನು ನಡೆಸಿದ್ದು, ಮನವಿದಾರರಿಗೆ ಜೂ 30ಕ್ಕೆ ಬರುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಆದಿಪುರುಷ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡುವಂತಹ ಹಲವು ವಿಚಾರಗಳಿವೆ‌. ಈಗಾಗಲೇ ನೇಪಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ಅದರಂತೆ ಭಾರತದಲ್ಲಿ ಸಹಾ ಸಿನಿಮಾ ಬ್ಯಾನ್ ಮಾಡಬೇಕು ಎನ್ನವುದು ಹಿಂದೂ ಪರ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಮನವಿಯನ್ನು ಮಾಡಿದ್ದರು. ಅವರು ಕೋರ್ಟ್ ಕೂಡಲೇ ಅರ್ಜಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಹಾ ಮನವಿ ಮಾಡಿಕೊಂಡಿದ್ದರು.

ನಿನ್ನೆ ಹೈಕೋರ್ಟ್ ಈ ಅರ್ಜಿಯ ಕುರಿತಾಗಿ ವಿಚಾರಣೆಯನ್ನು ನಡೆಸಿದ್ದು, ನ್ಯಾಯಾಲಯವು, ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ. ಆತುರದಲ್ಲಿ ವಿಚಾರಣೆಯನ್ನು ನಡೆಸುವುದು ಸಾಧ್ಯವಿಲ್ಲ. ಈ ಬಗ್ಗೆ ಜೂನ್ 30 ರಂದು ವಿಚಾರಣೆ ನಡೆಸಲಾಗುವುದು ಎಂದು ವಿಷ್ಣು ಗುಪ್ತಾ ಅವರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಈಗ ಇದರಿಂದ ಸಿನಿಮಾ ತಂಡಕ್ಕೊಂದು ದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ. ಮಾದ್ಯಮಗಳಲ್ಲಿ ಸಹಾ ಸಿನಿಮಾದ ಕುರಿತಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More