ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರ ಗುಂಪು ಸೇನಾ ವಾಹನಗಳಿಗೆ ಮುತ್ತಿಗೆ ಹಾಕಿದ್ದರಿಂದ, ಭಾರತೀಯ ಸೇನೆಯು (Indian Army) 12 ಜನ ದಾಳಿಕೋರರನ್ನು ಬಿಡುಗಡೆ ಮಾಡಿದಂತಹ ಘಟನೆಯೊಂದು ಮಣಿಪುರದಲ್ಲಿ (Manipur) ವರದಿಯಾಗಿದ್ದು, ಈಗ ಇದು ದೇಶವ್ಯಾಪಿ ಸುದ್ದಿಯಾಗಿದೆ. ಸೇನಾ ವಾಹನವನ್ನು ತಡೆಯಲು ಬಂದವರ ಬಳಿ ಸ್ಪೋ ಟ ಕಗಳು ಮತ್ತು ಶಸ್ತ್ರಾಸ್ತ್ರಗಳು ಇದ್ದವು ಎನ್ನಲಾಗಿದೆ.
ಸ್ಪೋ ಟ ಕ ಹಾಗೂ ಶಸ್ತ್ರಾಸ್ತ್ರ ಗಳನ್ನು ಗಮನಿಸಿದ ಭಾರತೀಯ ಸೇನೆಯು ಅದರಿಂದ ನಾಗರಿಕರ ಪ್ರಾಣಕ್ಕೆ ಅದು ಅಪಾಯವನ್ನು ತಂದೊಡ್ಡಬಹುದು ಎಂದು ನಾಗರಿಕರ ಪ್ರಾಣಕ್ಕೆ ಅಪಾಯವಾಗದಂತೆ ರಕ್ಷಣೆಯನ್ನು ಒದಗಿಸುವ ಸುಲವಾಗಿ ಧಾಳಿಕೋರರನ್ನು ಬಿಡುಗಡೆ ಮಾಡುವ ನಿರ್ಣಯವನ್ನು ಮಾಡಿದೆ. ಸೇನೆಯ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಯಾವುದೇ ದಾಳಿಯನ್ನು ನಡೆಸಲಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ.
ಸೇನೆಯ ಇಂತಹುದೊಂದು ಕಾರ್ಯಕ್ಕೆ ಮತ್ತು ನಿರ್ಧಾರಕ್ಕೆ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಕಮಾಂಡರ್ ಅವರನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಮೈತೇಯ್ ಉ ಗ್ರ ಗಾಮಿ ಸಂಘಟನೆಯ 12 ಕೆವೈಕೆಎಲ್ ಉ ಗ್ರ ಗಾ ಮಿ ಗಳನ್ನು ಸೇನೆಯು ಬಂಧಿಸಿತ್ತು. ಸೇನೆಯು ಹೇಳುವಂತೆ, 2015 ರಲ್ಲಿ ನಡೆದ ಆರು ಡೋಗ್ರಾ ಘಟಕದ ಮೇಲಿನ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ ಈ ಗುಂಪು ಭಾಗಿಯಾಗಿತ್ತೆನ್ನಲಾಗಿದೆ.
ಸೇನಾ ವಾಹನ ಸುತ್ತವರೆದ ಮಹಿಳೆಯರಿಗೆ ತಿಳಿ ಹೇಳುವ ಪ್ರಯತ್ನವನ್ನು ಮಾಡಿದರು ಅದು ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.