ಕನ್ನಡ ಸಿನಿಮಾ ರಂಗದಲ್ಲಿ ಬೆಳ್ಳಿ ತೆರೆಯ ಮೇಲೆ ಕೆಲವೊಂದು ಜೋಡಿಗಳು ಮಿಂಚಿ ಪ್ರೇಕ್ಷಕರ ಮೇಲೆ ಮೋಡಿ ಮಾಡಿವೆ. ಅಂತಹ ತೆರೆ ಮೇಲಿನ ಜೋಡಿಗಳಲ್ಲಿ ಡಾಲಿ- ಅಮೃತಾ ಜೋಡಿ ಸಹಾ ಒಂದಾಗಿದೆ. ಇವರನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೂ ಇದೆ. ಇವರು ತೆರೆಗೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಜೋಡಿಯಾದರೆ ಚೆನ್ನ ಎಂದು ಬಯಸುವ ಅಭಿಮಾನಿಗಳು ಸಹಾ ಇದ್ದಾರೆ. ಇಂತಹ ಸುದ್ದಿಗಳ ನಡುವೆಯೇ ಇವರು ಎಂಗೇಜ್ ಆಗಿದ್ದಾರೆನ್ನುವ ಸುದ್ದಿಯೊಂದು ಹರಿದಾಡಿತ್ತು.
ಈಗ ಈ ವಿಚಾರವಾಗಿ, ತಮ್ಮ ಗೆಳೆತನ ಹೇಗಿದೆ ಎನ್ನುವ ವಿಚಾರವಾಗಿ ನಟಿ ಅಮೃತಾ ಅಯ್ಯಂಗಾರ್ ಅವರು ಮಾತನಾಡಿದ್ದಾರೆ. ಡಾಲಿ ಮತ್ತು ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎನ್ನುವ ವಿಚಾರಕ್ಕೆ ನಟಿಯು ಸಂದರ್ಶನವೊಂದರಲ್ಲಿ ಬಹಳ ನೇರವಾಗಿ ಮಾತನಾಡಿದ್ದಾರೆ ಮತ್ತು ತಮ್ಮ ಕಡೆಯಿಂದ ಸ್ಪಷ್ಟನೆಯನ್ನು ನೀಡಿದ್ದಾರೆ. ನಟಿ ಮಾತನಾಡುತ್ತಾ,ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡುವುದಕ್ಕೆ ಇಷ್ಟಪಡ್ತಾರೆ.
ನಾವಿಬ್ಬರೂ ಈಗಾಗಲೇ ಮೂರು ಸಿನಿಮಾಗಳನ್ನು ಒಟ್ಟಿಗೆ ಮಾಡಿರುವುದರಿಂದ, ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತ ಊಹೆ ಮಾಡುತ್ತಾರೆ. ಅಲ್ಲದೇ ಅವರು ತೆರೆ ಮೇಲಿನ ಕೆಮಿಸ್ಟ್ರಿಗಿಂತ ತೆರೆ ಹಿಂದೆ ಬೇರೇನೋ ಇದೆ ಎಂದು ಯೋಚಿಸುವರು. ನಾನು ಡಾಲಿ ಅವರ ಜೊತೆಗೆ ಕೆಲಸ ಮಾಡೋದಕ್ಕೆ ಕಂಫರ್ಟ್ ಆಗಿದ್ದು, ನಮ್ಮ ನಡುವೆ ಒಂದು ಉತ್ತಮ ಸ್ನೇಹವಿದೆ, ನಾನಿನ್ನೂ ಸಿಂಗಲ್ ಆಗಿದ್ದೇನೆಂದು ನಟಿ ಡಾಲಿ ಜೊತೆಗಿನ ಡೇಟಿಂಗ್ ವಿಚಾರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.