ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಈಗಾಗಲೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ್ದು, ಶಾಕುಂತಲಂ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಈಗ ಅಲ್ಲು ಅರ್ಹಾ ಕುರಿತಾಗಿ ಹೊಸದೊಂದು ಸುದ್ದಿ ಹೊರಗೆ ಬಂದಿದೆ. ಸ್ಟಾರ್ ನಟ ಜೂ. ಎನ್ ಟಿ ಆರ್ ಅವರ ಹೊಸ ಸಿನಿಮಾ ‘ದೇವರ’ ದಲ್ಲಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಶಾಕುಂತಲಂ ಸಿನಿಮಾದ ನಂತರ ಟಾಲಿವುಡ್ ನಲ್ಲಿ ಬಾಲನಟಿ ಪಾತ್ರಕ್ಕೆ ಅಲ್ಲು ಅರ್ಹಾಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲು ಅರ್ಹಾಗೆ ಈಗಾಗಲೇ ಸಿನಿಮಾ, ಹಾಡಿನಲ್ಲಿ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಹಿಂದೆ ಯೂಟ್ಯೂಬ್ ಗಾಗಿ ನಟ ಅಲ್ಲು ಅರ್ಜುನ್ ನಿರ್ಮಿಸಿದ್ದ ‘ಅಂಜಲಿ ಅಂಜಲಿ’ ಹಾಡಿನಲ್ಲಿ ಅರ್ಹಾ ಕಾಣಿಸಿಕೊಂಡು ನೆಟ್ಟಿಗರು ಮತ್ತು ಅಭಿಮಾನಿಗಳ ಗಮನವನ್ನು ಸೆಳೆದಿದ್ದರು.
ಈಗ ಜೂ ಎನ್ ಟಿ ಆರ್ ದೇವರ ಸಿನಿಮಾದಲ್ಲಿ ಅಲ್ಲು ಅರ್ಹಾ ನಟಿಸುತ್ತಾರೆ ಎನ್ನಲಾಗಿದ್ದು, ಸಿನಿಮಾದಲ್ಲಿ ಅರ್ಹಾ ಜೂ. ಎನ್ ಟಿ ಆರ್ ಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆನ್ನಲಾಗಿದೆ. ಇದೇ ವೇಳೆ ಈ ಪಾತ್ರಕ್ಕಾಗಿ ಅಲ್ಲು ಅರ್ಹಾ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದ್ದು, ಇದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಹಾಗಾದರೆ ಅಲ್ಲು ಅರ್ಹ ತನ್ನ ಪಾತ್ರಕ್ಕೆ ಪಡೆದಿರುವ ಸಂಭಾವನೆ ಎಷ್ಟು? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಅಲ್ಲು ಅರ್ಹಾ ಜೂನಿಯರ್ ಎನ್ಟಿಆರ್ ಜೊತೆಗೆ ನಟಿಸಲು ಬರೋಬ್ಬರಿ 20 ಲಕ್ಷ ರೂ ಗಳ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಶಾಕುಂತಲಂ ಸಿನಿಮಾದಲ್ಲಿ ನಟಿಸಲು ಸಹಾ ಅಲ್ಲು ಅರ್ಹಾ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದರು ಎನ್ನುವುದು ವಾಸ್ತವ.