18 ವರ್ಷದ ನಿಯಮಕ್ಕೆ ಬ್ರೇಕ್: ಅಂತಾ ಸೀನ್ ಮಾಡಿ ಆ ನಟ ಸೇಫ್ ಫೀಲ್ ಕೊಟ್ರು ಎಂದ ತಮನ್ನಾ

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ನಟಿ ಸಮಂತಾ ಸಹಾ ಒಬ್ಬರು ಎನ್ನುವುದರಲ್ಲಿ ಅನುಮಾನ ಇಲ್ಲ. ದಕ್ಷಿಣ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲಿ ಸಹಾ ಹೆಸರನ್ನು ಮಾಡಿರೋ ಈ ನಟಿ ಸದ್ಯ ತಮ್ಮ ವೆಬ್ ಸಿರೀಸ್ ಲಸ್ಟ್ ಸ್ಟೋರಿ 2 ವಿಚಾರವಾಗಿ ಮತ್ತು ತಮ್ಮ ಬಾಯ್ ಫ್ರೆಂಡ್ ವಿಜಯ ವರ್ಮಾ ವಿಚಾರವಾಗಿ ಆಗಾಗ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಮ್ಮೆ ನಟಿ ತಮ್ಮ ಲಸ್ಟ್ ಸ್ಟೋರಿ 2 ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ.

ನಟಿ ತಮನ್ನಾ ಸಿನಿಮಾ ರಂಗಕ್ಕೆ ಬಂದ ಮೇಲೆ ತಮಗೆ ತಾವೇ ಒಂದು ನಿಯಮ ಅಳವಡಿಸಿಕೊಂಡಿದ್ದರು. ತಾನು ಯಾವುದೇ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸೋದಿಲ್ಲ ಅಂತ‌. ಆದರೆ ಈಗ ಲಸ್ಟ್ ಸ್ಟೋರಿಯಲ್ಲಿ ಬಾಯ್ ಫ್ರೆಂಡ್ ವಿಜಯ ವರ್ಮಾ ಜೊತೆ ಬೆಡ್ ರೂಂ ಸೀನ್ ಗಳಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿ, ತಮ್ಮ ಅಭಿಮಾನಿಗಳಿಗೆ ಮತ್ತು ಸಿನಿಮಾ ಪ್ರೇಮಿಗಳಿಗೆ ತಮನ್ನಾ ದೊಡ್ಡ ಶಾಕ್ ನೀಡಿದ್ದಾರೆ.

18 ವರ್ಷದಿಂದ ಹಾಕಿಕೊಂಡಿದ್ದ ನಿಯಮಕ್ಕೆ ಬ್ರೇಕ್ ಹಾಕಿದ ತಮನ್ನಾ, ನನಗೆ ನಟರ ಜೊತೆಗೆ ನಟಿಸುವಾಗ ಯಾವತ್ತೂ ಬಹಳ ಸೇಫ್ ಅಂತ ಅನಿಸಿರಲಿಲ್ಲ. ಆದರೆ ಅದು ಕಲಾವಿದರಿಗೆ ಮುಖ್ಯವಾಗಿದೆ. ನಿಜವಾಗಿಯೂ ನೀವು ಅಂತಹ ಸುರಕ್ಷತೆಯನ್ನು ಅನುಭವಿಸಬೇಕು. ಇದು ವಿಶೇಷವಾಗಿ ಇಂತಹ ಚಿತ್ರದಲ್ಲಿ ನೀವು ತೆಗೆದುಕೊಳ್ಳೋ ಒಂದು ಜಂಪ್ ಆಗಿದೆ. ವಿಜಯ ವರ್ಮಾ ನನಗೆ ಬಹಳ ಸೇಫ್ ಫೀಲ್ ನೀಡಿದ್ರು ಅಂದಿದ್ದಾರೆ.

ಏನನ್ನೂ ಹೇಳಲು, ಏನನ್ನೂ ಮಾಡಲು, ಒಂದು ನಿರ್ದಿಷ್ಟ ರೀತಿಯಲ್ಲಿ ನಾನು ಭಾವೋದ್ರಿಕ್ತವಾಗಲು ಹೆದರಲಿಲ್ಲ. ವಿಜಯ ವರ್ಮಾ ನನಗೆ ಬಹಳ ಸೇಫ್ ಆಗಿರೋ ಫೀಲ್ ಮಾಡಿಸಿದ್ರು. ಅಲ್ಲದೇ ಅದು ತುಂಬಾ ಸುಲಭ ಅನ್ನೋ ಭಾವನೆಯನ್ನ ಮೂಡಿಸಿದರು.‌ ನನಗೆ ಅದು ತುಂಬಾ ಇಷ್ಟ ಆಯ್ತು ಎಂದು ತಮನ್ನಾ ವಿಜಯ ವರ್ಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Related posts

ಸ್ಮೈಲ್ ಕೊಟ್ಳು ಸೂಜಿಮಲ್ಲಿ, ಸಿಗ್ನಲ್ ಕೊಟ್ಳಲು ಕಣ್ಣಿನಲ್ಲಿ.. ವೈರಲ್ ಆಗ್ತಿದೆ “ಠಾಣೆ” ಫಿಲಂ ಸಾಂಗ್.

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

This website uses cookies to improve your experience. We'll assume you're ok with this, but you can opt-out if you wish. Read More