ಆದಿಪುರುಷ್ ಸಿನಿಮಾ ಬಿಡುಗಡೆ ನಂತರ ಈಗಾಗಲೇ ಸಾಕಷ್ಟು ವಿ ವಾ ದ ಗಳಿಗೆ ಕಾರಣವಾಗಿದೆ. ಸಿನಿಮಾದ ಡೈಲಾಗ್ ಗಳ ವಿಚಾರವಾಗಿಯೂ ಸಾಕಷ್ಟು ಅಸಮಾಧಾನ ಮತ್ತು ಆಕ್ರೋಶಗಳು ವ್ಯಕ್ತವಾಗಿದ್ದು, ಸಿನಿಮಾ ತಂಡವು ಈಗಾಗಲೇ ಸಿನಿಮಾದಲ್ಲಿನ ಡೈಲಾಗ್ ಗಳನ್ನು ಬದಲಿಸುವುದಾಗಿಯೂ ಹೇಳಿಕೆಯನ್ನು ನೀಡಿದೆ. ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿರುವ ಮನೋಜ್ ಮುಂತಾಶಿರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಟ್ವೀಟ್ ಒಂದನ್ನು ಮಾಡುವ ಮೂಲಕ ವಿಷಯಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.
ಆದರೆ ಈಗ ಅದರ ಬೆನ್ನಲ್ಲೇ ಮನೋಜ್ ಮುಂತಾಶಿರ್ ನೀಡಿರುವ ಹೊಸ ಹೇಳಿಕೆಯೊಂದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಮ್ಮೆ ನೆಟ್ಟಿಗರು ಮನೋಜ್ ಮುಂತಾಶಿರ್ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೂ ಸಾಹಿತಿ ಮನೋಜ್ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ಅವರು ಹೇಳಿದ್ದಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.
ಸಿನಿಮಾದಲ್ಲಿ ಭಗವಾನ್ ಹನುಮಾನ್ ಅವರ ಸಂಭಾಷಣೆಗಳ ಬಗ್ಗೆ ಎದ್ದಿರುವ ವಿವಾದಗಳಿಗೆ ತನ್ನ ಸಮರ್ಥನೆ ನೀಡುತ್ತಾ, “ಬಜರಂಗಬಲಿ ದೇವರಲ್ಲ, ಆತ ಭಕ್ತ,. ನಾವೇ ಅವರನ್ನು ದೇವರನ್ನಾಗಿ ಮಾಡಿದ್ದೇವೆ ಏಕೆಂದರೆ ಅವರ ಭಕ್ತಿಯಲ್ಲಿ ಅಂತಹ ಶಕ್ತಿ ಇತ್ತು ಎಂದು ಹೇಳಿದ್ದಾರೆ. ಮನೋಜ್ ಮುಂತಾಶಿರ್ ಹೇಳಿದ ಈ ಮಾತಿಗೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಅವರನ್ನು ಅನೇಕರು ವಿ ರೋ ಧ ಮಾಡುತ್ತಿದ್ದಾರೆ.
ಸಿನಿಮಾ ಬಿಡುಗಡೆಯಾದ ಒಂದು ದಿನದ ನಂತರ, ಕೃತಿ ಸನೋನ್ ಮತ್ತು ಪ್ರಭಾಸ್ ನಟಿಸಿರುವ ಆದಿಪುರುಷ್ ಸಿನಿಮಾದಲ್ಲಿನ ಒಂದು ದೃಶ್ಯ, ನಿರ್ದಿಷ್ಟವಾಗಿ ಲಂಕಾ ದಹನ ದೃಶ್ಯಕ್ಕೆ ಸಂಬಂಧಪಟ್ಟ ಸಂಭಾಷಣೆಯನ್ನು ನೋಡಿದಾಗ, ಅದರಲ್ಲಿ ಹನುಮಂತನು ಇಂದ್ರಜಿತ್ ಗೆ, ಬಟ್ಟೆ ನಿನ್ನ ಅಪ್ಪನದ್ದು, ಅದರ ಮೇಲೆ ಹಾಕಿರುವ ಎಣ್ಣೆ ನಿಮ್ಮಪ್ಪನದ್ದು, ಬೆಂಕಿ ನಿಮ್ಮಪ್ಪನದ್ದು ಮತ್ತು ಈಗ ಸುಡೋದು ನಿಮ್ಮಪ್ಪನದ್ದು ಎನ್ನುವ ಡೈಲಾಗ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.