ಓಂ ರಾವುತ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ರಾಮನಾಗಿ ಹಾಗೂ ಕೃತಿ ಸನೋನ್ ಸೀತೆಯಾಗಿ ನಟಿಸಿದ್ದ, ಆದಿಪುರುಷ ಸಿನಿಮಾ ಬಿಡುಗಡೆ ನಂತರ ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿದೆ. ಸಿನಿಮಾದ ಸಂಭಾಷಣೆ, ವಿಎಫ್ಎಕ್ಸ್, ಪಾತ್ರಗಳ ವೇಷಭೂಷಣ ಎಲ್ಲವನ್ನೂ ಸಹಾ ಜನರು ಟೀಕೆ ಮಾಡಿದ್ದು, ಸಿನಿಮಾ ವಿವಾದಗಳಿಗೆ ಕಾರಣವಾಗಿತ್ತು. ಅಲ್ಲದೇ ಈ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ತನ್ನನ್ನು ಸಮರ್ಥನೆ ಮಾಡಿಕೊಳ್ಳಿವ ಭರದಲ್ಲಿ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು.
ಆದಿಪುರುಷ ಸಿನಿಮಾ ಜೂನ್ 16 ರಂದು ತೆರೆ ಕಂಡಿತ್ತು. ಓಂ ರಾವುತ್ ನಿರ್ದೇಶಿಸಿದ ಈ ಸಿನಿಮಾ ರಾಮಾಯಣ ಮಹಾಕಾವ್ಯವನ್ನು ಆಧರಿಸಿ ರೂಪುಗೊಂಡಿತ್ತು. ಆದರೂ ರಾಮಾಣಯವನ್ನು ತಿರುಚಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಸಂಭಾಷಣೆಕಾರ ಮನೋಜ್ ಮುಂತಾಶಿರ್ ನಾವು ಮಾಡಿದ್ದು ರಾಮಾಯಣ ಅಲ್ಲ ಎಂದು ಹೊಸದೊಂದು ಚರ್ಚೆ ಹುಟ್ಟು ಹಾಕಿದ್ದರು. ಹನಮಂತ ದೇವರಲ್ಲ ಎಂದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದ್ದರು.
ಆದರೆ ಈಗ ಸಾಕಷ್ಟು ವಿವಾದಗಳು ಹಾಗೂ ಜನರು ಮತ್ತು ಕೋರ್ಟ್ ನ ಅಸಮಾಧಾನದ ನಂತರ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಕ್ಷಮೆಯನ್ನು ಯಾಚಿಸಿದ್ದಾರೆ. ಟ್ವಿಟರ್ ನಲ್ಲಿ ಅವರು ಒಂದು ಟ್ವೀಟ್ ಅನ್ನು ಮಾಡಿದ್ದು, ಅದರಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರು ಈ ವಿಚಾರವಾಗಿ ಕ್ಷಮೆಯನ್ನ ಸಹಾ ಕೇಳಿದ್ದಾರೆ.
ಮನೋಜ್ ಮುಂತಾಶಿರ್ ತಮ್ಮ ಟ್ವೀಟ್ ನಲ್ಲಿ,
ಆದಿಪುರುಷ ಸಿನಿಮಾದಿಂದಾಗಿ ಜನರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ನಾನು ನನ್ನ ಎರಡೂ ಕೈಗಳನ್ನು ಮುಗಿದು ಬೇಷರತ್ ಕ್ಷಮೆಯಾಚಿಸುತ್ತೇನೆ, ಪ್ರಭು ಬಜರಂಗ ಬಲಿ ನಮ್ಮೆಲ್ಲರನ್ನೂ ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಹಾಗೂ ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ.