ದಕ್ಷಿಣ ಸಿನಿಮಾ ರಂಗದ ಜನಪ್ರಿಯ ನಟಿ ಮತ್ತು ಸಕ್ರಿಯ ರಾಜಕಾರಣಿ ಸಹಾ ಆಗಿರುವ ಖುಷ್ಬೂ ಸುಂದರ್ ಅವರಿಗೆ ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದ್ದು, ನಟಿ ಈ ಹಿಂದೆಯೂ ಒಮ್ಮೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ನಟಿಯು ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸದೊಂದು ಟ್ವೀಟ್ ಮಾಡಿದ್ದು, ಅದನ್ನು ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿಗೆ ಏನಾಯ್ತು? ಎಂದು ಆತಂಕ ಸಹಾ ಪಡುತ್ತಿದ್ದಾರೆ. ಖುಷ್ಬೂ ಸುಂದರ್ ಅವರು ಏಪ್ರಿಲ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಮತ್ತೊಮ್ಮೆ ನಟಿ ಖುಷ್ಬೂ ತಾವು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪೋಸ್ಟ್ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಅನಾರೋಗ್ಯದ ಕುರಿತಾಗಿ ಟ್ವೀಟ್ ಮಾಡಿರುವ ನಟಿಯು, ತಾವು ಟೇಲ್ ಬೋನ್ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವುದಾಗಿ ಬರೆದುಕೊಂಡಿದ್ದಾರೆ.ಈ ಹಿಂದೆ ಸಹಾ ನಟಿಯನ್ನು ಈ ಸಮಸ್ಯೆ ಕಾಡಿತ್ತು. ಈಗ ಮತ್ತೊಮ್ಮೆ ಸಮಸ್ಯೆ ಎದುರಾಗಿದ್ದರಿಂದ ಚಿಕಿತ್ಸೆಗಾಗಿ ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟಿ ತಮ್ಮ ಟ್ವೀಟ್ ನಲ್ಲಿ, ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ಕೋಕ್ಸಿಕ್ಸ್ ಅಥವಾ ಮೂಳೆ ಚಿಕಿತ್ಸೆಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನಗೆ ಈ ಹಿಂದೆಯೂ ಇದೇ ಸಮಸ್ಯೆ ಕಾಡಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಗೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಖುಷ್ಬೂ ಅವರ ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಮತ್ತು ಸಿನಿಮಾ ರಂಗದ ಸ್ನೇಹಿತರು ಪ್ರತಿಕ್ರಿಯೆ ನೀಡುತ್ತಾ, ಬೇಗ ಗುಣಮುಖರಾಗಿ ಬನ್ನಿ ಎಂದು ಶುಭ ಹಾರೈಸಿದ್ದಾರೆ.