ಇತ್ತೀಚಿಗಷ್ಟೇ ದಿ ಕೇರಳ ಸ್ಟೋರಿ (The Kerala Story) ಸಿನಿಮಾದ ಮೂಲಕ ದೇಶದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡರು ನಟಿ ಅದಾ ಶರ್ಮಾ (Adah Sharma). ಸಿನಿಮಾರಂಗದಲ್ಲಿ ಕೆಲವು ವರ್ಷಗಳಿಂದಲೂ ನಟಿಸುತ್ತಿದ್ದರು ಕೂಡ ನಟಿಗೆ ದೊಡ್ಡ ಮಟ್ಟದ ಹೆಸರನ್ನು ತಂದು ಕೊಟ್ಟಿದ್ದು ಮಾತ್ರ ಕೇರಳ ಸ್ಟೋರಿ ಎನ್ನುವ ಮಾತು ಸತ್ಯವಾಗಿದೆ. ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಕೇರಳ ಸ್ಟೋರಿ ಸಿನಿಮಾದ ನಂತರ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ಕೆಲವೇ ದಿನಗಳಲ್ಲಿ ಹಿಂದೆಯಷ್ಟೇ ನಟಿ ಅದಾ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ವಿಚಾರವೊಂದನ್ನು ಶೇರ್ ಮಾಡಿದ್ದು, ಇದು ಅಭಿಮಾನಿಗಳಿಗೆ ಬಹಳ ಬೇಸರವನ್ನು ಉಂಟುಮಾಡಿದೆ. ಜೇನುಗೂಡು ಎಂದು ಕರೆಯಲ್ಪಡುವ ಉರ್ಟೇರಿಯಾ ಎನ್ನುವಂತಹ ಚರ್ಮದ ಕಾಯಿಲೆಯಿಂದ ನಟಿ ಅದ ಶರ್ಮಾ ಬಳಲುತ್ತಿದ್ದಾರೆ. ನಟಿ ಈ ವಿಷಯವನ್ನು ಹಂಕೊಂಡಿದ್ದು, ಅಭಿಮಾನಿಗಳು ಶೀಘ್ರವಾಗಿ ಗುಣಮುಖವಾಗುವಂತೆ ನಟಿಗೆ ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಉರ್ಟೇರಿಯ ಎನ್ನುವುದು ಚರ್ಮದ ಮೇಲೆ ಊದಿಕೊಂಡ ಕೆಂಪು ಅಥವಾ ಚರ್ಮದ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ಇದು ತುರಿಕೆಯಿಂದ ಪ್ರಾರಂಭವಾಗಿ ಚರ್ಮದ ಹಾನಿಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಇದು ಸಾಮಾನ್ಯವಾಗಿ ಕೈಗಳು, ಮುಖ, ತುಟಿ, ಕಿವಿಗಳು ಗಂಟಲು ಅಥವಾ ನಾಲಗೆ ಸೇರಿದಂತೆ ದೇಹದ ಮೇಲೆ ಎಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು
ಅಲ್ಲದೇ ಇದು 26 ಗಂಟೆ ಗಳಿಗಿಂತ ಕಡಿಮೆ ಅವಧಿಯಲ್ಲಿ ಕಣ್ಮರೆಯಾಗುತ್ತದೆ
ಮಳೆಗಾಲ ಆರಂಭವಾದಾಗ ಈ ರೀತಿಯ ಚರ್ಮ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಆದ ಕಾರಣ ಕೈ, ಕಾಲು, ಮುಖಗಳಲ್ಲಿ ತೀವ್ರವಾದ ತುರಿಕೆ ಏನಾದರೂ ಕಂಡುಬದ್ದರೆ ಅಥವಾ ಅಂತಹ ಅನುಭವ ಏನಾದರೂ ಆದರೆ ಆಗ ನಿಮ್ಮ ಹತ್ತಿರದ ವೈದ್ಯರದು ಸಂಪರ್ಕಿಸಿ ಎಂಬುದು ತಜ್ಞರ ಸಲಹೆಯಾಗಿರುತ್ತದೆ.