ನಟ ಉಪೇಂದ್ರ ಅವರು ಆಡಿದ ಮಾತಿನಿಂದಾಗಿ ಅವರ ಮೇಲೆ ದೂರು ದಾಖಲಾದ ಬೆನ್ನಲ್ಲೇ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು ನಟ ಉಪೇಂದ್ರ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ನಂತರ ನಟ ಉಪೇಂದ್ರ ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಮತ್ತು ಅವರು ಎಸ್ಕೇಪ್ ಆಗಿದ್ದಾರೆಂದು ಸುದ್ದಿಗಳು ಹರಿದಾಡಿದೆ. ಆದ ಕಾರಣ ಈಗ ಪೋಲಿಸರು ಬೇರೆಯವರ ಕಡೆಯಿಂದ ನಟನನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ..
ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಉಪೇಂದ್ರ ಅವರಿಗೆ ಸೇರಿದಂತಹ ಎರಡು ಮನೆಗಳು ಹಾಗೂ ಅವರ ವಾಟ್ಸಪ್ ನಂಬರ್ ಗೆ ಸಹಾ ನೋಟಿಸ್ ಕಳಿಸಿರುವುದಾಗಿ ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಅನ್ನು ಕೂಡಾ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ ಅಂತ ಹಲಸೂರುಗೇಟ್ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಕಡೆ ಉಪೇಂದ್ರ ಅವರ ನೀಡಿದಂತಹ ವಿ ವಾ ದಾ ತ್ಮ ಕ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಇದರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆಯನ್ನು ನಡೆಸಲು ಸಜ್ಜಾಗಿದ್ದು, ಈ ವೇಳೆ ಉಪೇಂದ್ರ ಅವರ ಪ್ರತಿಕೃತಿ ದಹನ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.