2022 ರ ಸೂಪರ್ ಹಿಟ್ ಸಿನಿಮಾಗಳಲ್ಲಿ ತ್ರಿಬಲ್ ಆರ್ ಸಿನಿಮಾ ಸಹಾ ಒಂದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ದಾಖಲೆಯನ್ನು ಬರೆದಿತ್ತು. ಒಂದೂವರೆ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸದೊಂದು ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಅಷ್ಟು ಮಾತ್ರವಲ್ಲದೇ ಈ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ದಕ್ಕಿದ್ದು ಮತ್ತೊಂದು ಸಾಧನೆಯಾಗಿತ್ತು. ಈ ಸಿನಿಮಾದ ಮೂಲಕ ನಾಯಕ ನಟರಾದ ರಾಮ್ ಚರಣ್ ಮತ್ತು ಜೂ. ಎನ್ಟಿಆರ್ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು
ಈಗ ತ್ರಿಬಲ್ ಆರ್ ತಂಡ ಆಸ್ಕರ್ ವಿಜೇತರನ್ನು ಆಯ್ಕೆ ಮಾಡುವ ಅವಕಾಶವನ್ನು ಕೂಡಾ ಪಡೆದುಕೊಂಡಿದ್ದಾರೆ. ಅಂದರೆ ಅವರಿಗೆ ಆಸ್ಕರ್ ಜ್ಯೂರಿ ಆಗುವ ಮಹತ್ವದ ಅವಕಾಶ ದೊರೆತಿದೆ. ರಾಜ ಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಮೂಲಕ ವಿಶ್ವ ಸಿನಿಮಾರಂಗ ಭಾರತದ ಸಿನಿಮಾಗಳ ಕಡೆಗೆ ತಿರುಗಿ ನೋಡುವಂತೆ ಆಗಿದೆ. ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವ ಸಿನಿಮಾರಂಗದ ಗಮನವನ್ನು ತನ್ನ ಕಡೆಗೆ ಸೆಳೆದಿದೆ. ಈಗ ಆಸ್ಕರ್ ಟೀಂ ತ್ರಿಬಲ್ ಆರ್ ತಂಡದ ಸದಸ್ಯರಿಗೆ ಮತ್ತೊಂದು ಗೌರವ ನೀಡಲು ಮುಂದಾಗಿದೆ.
ತ್ರಿವಲ್ ಆರ್ ತಂಡದ ನಾಲ್ಕು ಜನರಿಗೆ ಆಸ್ಕರ್ ಜ್ಯೂರಿಯಲ್ಲಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅಕಾಡೆಮಿ ಈ ಬಾರಿ ಹೊಸದಾಗಿ ಸೇರ್ಪಡೆಯಾದ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಾಮ್ ಚರಣ್, ಜ್ಯೂ. ಎನ್ಟಿಆರ್ ಕೀರವಾಣಿ ಅವರಿಗೆ ಆಸ್ಕರ್ ವಿಜೇತರ ಆಯ್ಕೆಯಲ್ಲಿ ಮತ ಚಲಾಯಿಸುವ ಅವಕಾಶವನ್ನು ನೀಡಲಾಗಿದೆ. ಆದರೆ ಇಲ್ಲಿ ರಾಜಮೌಳಿ ಅವರ ಹೆಸರು ಇಲ್ಲದೇ ಇರುವುದು ಅಚ್ಚರಿಯನ್ನು ಮೂಡಿಸಿದೆ. ಅದೇ ವೇಳೆ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಈ ವಿಷಯ ಖುಷಿಯನ್ನು ನೀಡಿದೆ.