ಧರ್ಮಾಧಿಕಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಧರ್ಮ ಉಳಿಯಬೇಕಷ್ಟೇ: ಪ್ರಕಾಶ್ ರೈ

ದಕ್ಷಿಣ ಸಿನಿಮಾ ರಂಗದ ಜನಪ್ರಿಯ ನಟ ಪ್ರಕಾಶ್ ರೈ ಶಿವಮೊಗ್ಗ ನಗರದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಉಜಿರೆಯಲ್ಲಿ ನಡೆದಂತಹ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಪ್ರತಿಕ್ರಿಯೆ ನೀಡುತ್ತಾ ಹೇಳಿರುವ ಮಾತೊಂದು ಇದೀಗ ದೊಡ್ಡ ಸುದ್ದಿಯಾಗಿದೆ. ಪ್ರಕಾಶ್ ರೈ ಅವರು ನೀಡಿರುವ ಹೇಳಿಕೆಯ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಅದೇ ವೇಳೆ ಕೆಲವರು ಅವರ ಮಾತು ಸರಿಯಿದೆ ಎಂತಲೂ ಹೇಳುತ್ತಿದ್ದಾರೆ.

ಪ್ರಕಾಶ್ ರೈ ಅವರು ಮಾತನಾಡುತ್ತಾ ಗುಪ್ತಚರ ಇಲಾಖೆಗಳಿಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆಯನ್ನು ಮಾಡುತ್ತಾ, ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ. ಸತ್ಯ ಎನ್ನುವುದು ಹೊರಗೆ ಬಂದೇ ಬರುತ್ತದೆ ಎನ್ನುವ ಮಾತನ್ನು ಹೇಳುವ ಮೂಲಕ ಹೊಸ ಚರ್ಚೆಯೊಂದನ್ನು ನಟ ಹುಟ್ಟು ಹಾಕಿದ್ದಾರೆ. ಧರ್ಮದ ಸೋಗಿನವರು ತಪ್ಪು ಮಾಡಿದರೆ ಅದನ್ನು ತನಿಖೆ ಮಾಡುವುದು ಸರಿಯಾಗಿಯೇ ಇದೆ.

ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಇದು ತನಿಖೆಯ ಭಾಗವಾಗಿದ್ದರೆ ನಿಜಾಂಶ ತಿಳಿಯುವ ಅವಶ್ಯಕತೆ ಇದ್ದರೆ ಅದನ್ನು ಮಾಡಲಿ. ಈ ವಿಚಾರವಾಗಿ ನನಗೆ ಯಾವುದೇ ಆಕ್ಷೇಪ ಇಲ್ಲ. ಧರ್ಮಸ್ಥಳ ಧರ್ಮ ಬಿಡಿ ಎಂದು ನಾನು ಹೇಳಲು ಬರುವುದಿಲ್ಲ, ಆದರೆ ಕೊನೆಯದಾಗಿ ಧರ್ಮ ಉಳಿಯಬೇಕು ಎನ್ನುವ ಮಾತುಗಳನ್ನು ಪ್ರಕಾಶ್ ರೈ ಹೇಳಿದ್ದಾರೆ.

Related posts

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ

This website uses cookies to improve your experience. We'll assume you're ok with this, but you can opt-out if you wish. Read More