ಸಿನಿಮಾ ರಂಗದಲ್ಲಿ ಆಗಾಗ ಸದ್ದು ಮಾಡುವ ವಿಚಾರವೆಂದರೆ ಅದು ಕಾಸ್ಟಿಂಗ್ ಕೌಚ್. ಈ ವಿಚಾರವಾಗಿ ಈಗಾಗಲೇ ಕೆಲವು ನಟಿಯರು ದನಿ ಎತ್ತಿದ್ದಾರೆ. ಕೆಲವರು ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ದಿನಗಳಲ್ಲಿ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ನಟಿಯರು ತಮಗಾಗ ಅನುಭವಕ್ಕೆ ಕಾರಣ ಯಾರು ಎನ್ನುವುದನ್ನು ಹೇಳದೇ ತಮಗೆ ಎದುರಾದ ಕಹಿ ಅನುಭವದ ಬಗ್ಗೆ ಹೇಳಿ ಶಾಕ್ ನೀಡಿದ್ದಾರೆ.
ಈಗ ಇದೇ ಹಾದಿಯಲ್ಲಿ ಬಾಲಿವುಡ್ ನ ಹಿರಿಯ ನಟಿ, ಡ್ರೀಮ್ ಗರ್ಲ್ ಖ್ಯಾತಿಯ ನಟಿ ಹೇಮಾ ಮಾಲಿನಿ ಒಂದು ಕಾಲದಲ್ಲಿ ನಂಬರ್ ಒನ್ ನಟಿಯಾಗಿ ಸಿನಿಮಾ ರಂಗವನ್ನು ಆಳಿದ್ದರು. ಆದರೆ ಈ ನಟಿಗೂ ಸಹಾ ಸಿನಿಮಾವೊಂದರಲ್ಲಿ ನಿರ್ದೇಶಕರಿಂದ ಎದುರಾದ ಮುಜುಗರದ ಘಟನೆಯನ್ನು ಹೇಳಿಕೊಂಡಿದ್ದು, ಈ ವಿಚಾರ ಕೇಳಿ ಈಗ ನೆಟ್ಟಿಗರು ಖಂಡಿತ ಶಾಕ್ ಆಗಿದ್ದಾರೆ. ಹಾಗಾದರೆ ನಟಿ ದಶಕಗಳ ನಂತರ ಹಂಚಿಕೊಂಡ ಆ ಘಟನೆ ಏನು ? ತಿಳಿಯೋಣ ಬನ್ನಿ.
ಸಿನಿಮಾವೊಂದರ ಚಿತ್ರೀಕರಣ ನಡೆಯುವ ವೇಳೆಯಲ್ಲಿ ನಿರ್ದೇಶಕರು ನಟಿಯು ತಮ್ಮ ಸೀರೆಯ ಸೆರಗಿನ ಪಿನ್ ತೆಗೆಯಲು ಬಯಸಿದ್ದರಂತೆ. ಈ ವಿಚಾರವನ್ನು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹೇಮಾ ಮಾಲಿನಿ ಅವರು ನಾನು ಸದಾ ನನ್ನ ಸೀರೆಯ ಸೆರಗಿಗೆ ಪಿನ್ ಮಾಡುತ್ತಿದ್ದೆ. ಆದರೆ ಆ ದಿನ ನಿರ್ದೇಶಕರು ಪಿನ್ ತೆಗೆಯುವಂತೆ ಹೇಳಿದರು.
ಆಗ ನಾನು ಪಿನ್ ತೆಗೆದರೆ ಸೀರೆ ಕೆಳಗೆ ಜಾರುತ್ತದೆ ಎಂದು ಹೇಳಿದೆ. ನನ್ನ ಮಾತಿಗೆ ಪ್ರತಿಕ್ರಿಯೆ ಕೊಟ್ಟ ನಿರ್ದೇಶಕರು ನಮಗೆ ಅದೇ ಬೇಕು ಎಂದು ಹೇಳಿದರು ಎನ್ನುವ ಮಾತನ್ನು ಹೇಮಾ ಮಾಲಿನಿ ಹೇಳಿದ್ದಾರೆ. ನಟಿ ಹೇಮಾ ಮಾಲಿನಿ ಅವರು ಹಂಚಿಕೊಂಡಿರುವ ಈ ವಿಷಯ ಈಗ ಚರ್ಚೆಗೆ ಕಾರಣವಾಗಿದೆ ಮತ್ತು ಅನೇಕರು ಅಂದಿನ ದಿನಗಳಲ್ಲೂ ಸಿನಿಮಾಗಳಲ್ಲಿ ಇದೆಲ್ಲವೂ ಇತ್ತೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.