ಟಾಲಿವುಡ್ ನಲ್ಲಿ ಶ್ರೀಲೀಲಾ ಅಬ್ಬರ: ರಶ್ಮಿಕಾ, ಪೂಜಾ ಹೆಗ್ಡೆಗೆ ಪ್ರಬಲ ಸ್ಫರ್ಧಿಯಾದ ಕಿಸ್ ಸಿನಿಮಾ ಬೆಡಗಿ

ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟ ನಟಿ ಶ್ರೀಲೀಲಾ ಈಗ ನೆರೆಯ ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ‌. ನಿರ್ಮಾಪಕರು ಮತ್ತು ನಿರ್ದೇಶಕರು ನಟಿಯ ಕಾಲ್ ಶೀಟ್ ಗಾಗಿ ಕಾಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಸುಳ್ಳಲ್ಲ. ಸದ್ಯಕ್ಕಂತೂ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳಿತ್ತಿದ್ದು, ನಟಿ ರಶ್ಮಿಕಾ ಮಂದಣ್ಣಾಗೆ ಒಂದು ಪ್ರಬಲ ಪೈಪೋಟಿ ನೀಡಲು ಸಜ್ಜಾದಂತೆ ಕಾಣುತ್ತಿದೆ.ಶ್ರೀಲೀಲಾ ಸದ್ಯಕ್ಕೆ ತೆಲುಗು ಸಿನಿಮಾ ರಂಗದ ಹಲವು ನಿರ್ಮಾಪಕರು ಮತ್ತು ನಿರ್ದೇಶಕರ ಮೆಚ್ಚಿನ ನಟಿಯಾದಂತೆ ಕಾಣುತ್ತಿದ್ದಾರೆ. ಪ್ರಸ್ತುತ ನಟಿಯು ಟಾಲಿವುಡ್ ನ ಸ್ಟಾರ್ ಗಳಾದ ಮಹೇಶ್ ಬಾಬು, ಪವನ್ ಕಲ್ಯಾಣ್, ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸಿದ್ದು, ಈ

ಸಿನಿಮಾಗಳು ಕೊನೆಯ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಇದೇ ವೇಳೆ ನಟಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಮತ್ತು ನಟ ನಿತಿನ್ ನಾಯಕನಾಗಿರುವ ಸಿನಿಮಾದಲ್ಲೂ ನಾಯಕಿಯಾಗಿದ್ದಾರೆ.ಇದಲ್ಲದೇ ಮಾಸ್ ಮಹಾರಾಜ ಖ್ಯಾತಿಯ ನಟ ರವಿತೇಜ ಜೊತೆಗೆ ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿ ಸದ್ದು ಮಾಡಿದ್ದ ಶ್ರೀಲೀಲಾ ಈಗ ಮತ್ತಿಮ್ಮೆ ರವಿತೇಜಾಗೆ ಜೋಡಿಯಾಗಿ, ಅವರ ಸಿನಿಮಾದಲ್ಲಿ ನಾಯಕಿಯಾಗುತ್ತಿರುವ ವಿಷಯ ಹೊರ ಬಂದಿದೆ. ಶ್ರೀಲೀಲಾ ಕೈಯ್ಯಲ್ಲಿ ಪ್ರಸ್ತುತ ಆರೇಳು ಸಿನಿಮಾಗಳು ಇವೆ

ಎನ್ನುವುದು ಅಚ್ಚರಿ ಮೂಡಿಸಿದೆ. ರಾಮ್ ಪೊತಿನೇನಿ, ನವೀನ್ ಪೋಲಿಶೆಟ್ಟಿ ಮತ್ತು ವಿಜಯ ದೇವರಕೊಂಡ ಅವರ ಹೊಸ ಸಿನಿಮಾಗಳಿಗೂ ಶ್ರೀಲೀಲಾ ನಾಯಕಿಯಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಸದ್ಯಕ್ಕೆ ಎಲ್ಲರಿಗಿಂತ ಬ್ಯಸಿಯಾಗಿರುವ ನಟಿ ಶ್ರೀಲೀಲಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿ ಇಂತಹವರನ್ನೆಲ್ಲಾ ಹಿಂದೆ ಹಾಕಿ ಶ್ರೀಲೀಲಾ ಹೊಸ ಹೊಸ ಅವಕಾಶಗಳನ್ಬು ಪಡೆದುಕೊಂಡಿದ್ದು, ನಟಿಯ ಈ ಡಿಮ್ಯಾಂಡ್ ಮುಂದಿನ ದಿನಗಳಲ್ಲಿ ಖಂಡಿತ ನಟಿ ರಶ್ಮಿಕಾಗೆ ಪ್ರಬಲ ಪೈಪೋಟಿ ಆಗುತ್ತೆ ಅನ್ನೋದು ನಟಿಯ ಅಭಿಮಾನಿಗಳ ಮಾತಾಗಿದೆ.

Related posts

ಸ್ಮೈಲ್ ಕೊಟ್ಳು ಸೂಜಿಮಲ್ಲಿ, ಸಿಗ್ನಲ್ ಕೊಟ್ಳಲು ಕಣ್ಣಿನಲ್ಲಿ.. ವೈರಲ್ ಆಗ್ತಿದೆ “ಠಾಣೆ” ಫಿಲಂ ಸಾಂಗ್.

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

This website uses cookies to improve your experience. We'll assume you're ok with this, but you can opt-out if you wish. Read More