ಕೊನೆಗೂ ತನ್ನ ಮಗುವಿನ ತಂದೆ ಯಾರೆಂದು ತಿಳಿಸಿದ ನಟಿ ಇಲಿಯಾನಾ

ಬಹುಭಾಷಾ ನಟಿ, ವರ್ಷಗಳ ಹಿಂದೆ ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ, ಗೋವಾ ಸುಂದರಿ ನಟಿ ಇಲಿಯಾನಾ ಡಿಕ್ರೂಜ್ ಅವರು ಸದ್ಯ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ವಿಶೇಷ ಏನೆಂದರೆ ನಟಿ ಮದುವೆಗೂ ಮೊದಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಇಲ್ಲಿ ಇನ್ನೊಂದು ಆಸಕ್ತಿಕರ ವಿಚಾರ ಏನೆಂದರೆ ನಟಿ ತನ್ನ ಮಗುವಿನ ತಂದೆ ಯಾರು ಎನ್ನುವುದನ್ನು ಮಾತ್ರ ಇದುವರೆಗೂ ಬಹಿರಂಗ ಪಡಿಸಿಲ್ಲ. ಆದ್ದರಿಂದಲೇ ಎಲ್ಲರ ಪ್ರಶ್ನೆ ಮಗುವಿನ ತಂದೆ ಯಾರು ಎನ್ನುವುದಾಗಿತ್ತು.

ನಟಿಯ ಮಗುವಿನ ತಂದೆ ಯಾರು ಎನ್ನುವ ವಿಚಾರಕ್ಕೆ ಒಂದಷ್ಟು ಸುದ್ದಿಗಳು ಸಹಾ ಹರಿದಾಡಿದ್ದವು. ಈಗ ಇವೆಲ್ಲವುಗಳ ನಡುವೆ ನಟಿ ಇಲಿಯಾನಾ ತಮ್ಮ ಮಗುವಿನ ತಂದೆ ಯಾರು ಎನ್ನುವ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಡೇಟ್ ನೈಟ್ ಎಂದು ಬಾಯ್ ಫ್ರೆಂಡ್ ಜೊತೆಯಿರುವ ಫೋಟೋವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ನಟಿ ಇಲಿಯಾನಾ ತಾವು ಪ್ರೆಗ್ನೆಂಟ್ ಎಂದು ಬಹಿರಂಗಪಡಿಸಿ ಎಲ್ಲರಿಗೂ ಶಾಕ್ ನೀಡಿದ್ದರು.

ಇಲಿಯಾನಾಗೆ ಮದುವೆಯಾಗದ ಕಾರಣ ಅನೇಕರಲ್ಲಿ, ವಿಶೇಷವಾಗಿ ನಟಿಯ ಅಭಿಮಾನಿಗಳಲ್ಲಿ ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಕುತೂಹಲವೊಂದನ್ನು ಹುಟ್ಟು ಹಾಕಿತ್ತು. ನಟಿ ತಿಂಗಳುಗಳು ಕಳೆದರೂ ಸಹಾ ತಮ್ಮ ಮಗುವಿನ ತಂದೆಯ ಬಗ್ಗೆ ಮಾತ್ರ ಏನೂ ಹೇಳದೇ ವಿಷಯವನ್ನು ಗುಟ್ಟಾಗಿಯೇ ಇಟ್ಟಿದ್ದರು. ಈಗ ನಟಿಯು ಮೊದಲ ಬಾರಿಗೆ ತಮ್ಮ ಬಾಯ್‌ ಫ್ರೆಂಡ್ ಮುಖವನ್ನು ರಿವೀಲ್ ಮಾಡಿದ್ದಾರೆ ಆದರೆ ಹೆಸರನ್ನು ಮಾತ್ರ ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More