ಆ ನಂಬಿಕೆ ಕೆಡವಿದ್ದಕ್ಕೆ ನಿಮಗೆ ಪ್ರಣಾಮಗಳು: ಹಾಸ್ಟೆಲ್ ಹುಡುಗರಿಗೆ ರಾಜ್ ಬಿ ಶೆಟ್ಟಿ ಪತ್ರ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದು ಜನ ಮೆಚ್ಚುಗೆಯನ್ನು ಪಡೆಯುತ್ತಿದೆ. ಹೊಸ ಪ್ರತಿಭೆಗಳ ನಿರ್ಮಾಣದ ಈ ಸಿನಿಮಾ ಬಿಡುಗಡೆಗೆ ಮೊದಲು ನಟಿ ರಮ್ಯಾ ಅವರಿಂದ ಸಂಕಷ್ಟಕ್ಕೆ ಗುರಿಯಾದರೂ, ಅನಂತರ ಕೋರ್ಟ್ ನಲ್ಲಿ ಗೆಲ್ಲುವ ಮೂಲಕ ನಿಗಧಿತ ದಿನದಂದು ತೆರೆಗೆ ಬಂದಿದೆ. ಸಿನಿಮಾ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಸಿನಿಮಾ ಗೆದ್ದ ಖುಷಿಯಲ್ಲಿರುವಾಗಲೇ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ಪತ್ರವೊಂದನ್ನು ಬರೆದಿದ್ದಾರೆ.

ರಾಜ್ ಬಿ ಶೆಟ್ಟಿ ಅವರು ಬರೆದ ಪತ್ರದಲ್ಲಿರುವ ವಿಚಾರ ಏನು ಎನ್ನುವುದಾದರೆ, ಪ್ರೀತಿಯ HHB  ತಂಡಕ್ಕೆ, ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್‌ನ ಅಗತ್ಯವಿದೆ, ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆಯಿದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದದ್ದಕ್ಕೆ ಧನ್ಯವಾದಗಳು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನೆಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂಥ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ. ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು.

ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು Practicality ಇಷ್ಟು ಜೊತೆಗಿದ್ದರೆ “ನೀವೂ” ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ HHB ತಂಡಕ್ಕೆ ಜಯವಾಗಲಿ. ಪ್ರೀತಿಯಿಂದ.. ರಾಜ್ ಬಿ ಶೆಟ್ಟಿ ಎಂದು ಬರೆದಿದ್ದಾರೆ. ಈ ಮೂಲಕ ಅವರು ಚಿತ್ರ ತಂಡದ ಯಶಸ್ಸಿಗೆ ಖುಷಿ ಪಟ್ಟಿರುವ ವಿಚಾರವನ್ನು ಹಂಚಿಕೊಂಡು, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More