ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಕನ್ನಡತಿ ಮುಗಿದಿದೆಯಾದರೂ ಜನರು ಇನ್ನೂ ಈ ಧಾರಾವಾಹಿಯನ್ನು ಮರೆತಿಲ್ಲ. ಈ ಸೀರಿಯಲ್ ನ ಪಾತ್ರಗಳು ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿದೆ. ಇದೇ ಸೀರಿಯಲ್ ನಲ್ಲಿ ನೆಗೆಟಿವ್ ಶೇಡ್ ಇದ್ದ ಸಾನಿಯಾ ಪಾತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದ ನಟಿ ರಮೋಲಾ ಸಹಾ ಎಲ್ಲರಿಗೂ ಚಿರಪರಿಚಿತ. ನಾಯಕ, ನಾಯಕಿಗೆ ಟಾರ್ಚರ್ ನೀಡುವ ಈ ಪಾತ್ರ ಪ್ರೇಕ್ಷಕರ ವಿಶೇಷವಾದ ಗಮನವನ್ನು ಸೆಳೆದಿತ್ತು. ಆದರೆ ನಟಿ ರಮೋಲಾ ಕಾರಣಾಂತರಗಳಿಂದ ಈ ಸೀರಿಯಲ್ ನಿಂದ ಹೊರಗೆ ನಡೆದಿದ್ದರು.
ಕನ್ನಡತಿ ಸೀರಿಯಲ್ ನಿಂದ ರಮೋಲಾ ಹೊರ ಬಂದ ಮೇಲೆ ಬಹುಶಃ ಅವರಿಗೆ ಬೇರೆ ಅವಕಾಶಗಳು ಸಿಕ್ಕಿರಬಹುದು ಎನ್ನಲಾಗಿತ್ತು. ಈಗ ಕನ್ನಡತಿ ನಂತರ ರಮೋಲಾ ಹೊಸ ಸೀರಿಯಲ್ ಒಂದಕ್ಕೆ ಎಂಟ್ರಿ ನೀಡಿಯಾಗಿದೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ಅಮೃತ ಧಾರೆ ಸೀರಿಯಲ್ ನ ಮೂಲಕ ರಮೋಲಾ ಮತ್ತೆ ಕಿರುತೆರೆಗೆ ಎಂಟ್ರಿ ನೀಡಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಅಮೃತ ಧಾರೆ ಸೀರಿಯಲ್ ನಲ್ಲಿ ರಶ್ಮಿಕಾ ಹೆಸರಿನ ಪಾತ್ರಕ್ಕೆ ರಮೋಲಾ ಬಣ್ಣ ಹಚ್ಚಿದ್ದಾರೆ.
ಸೀರಿಯಲ್ ನ ನಾಯಕ ಗೌತಮ್ ಗೆ ಮದುವೆ ಮಾಡಲು ಅಪರ್ಣಾ ಮತ್ತು ಆನಂದ್ ಪ್ರಯತ್ನ ಮಾಡಿದ್ದು, ಅವರ ಭಾಗವಾಗಿ ಗೌತಮ್ ಮತ್ತು ರಶ್ಮಿಕಾ ಭೇಟಿಯಾಗುತ್ತದೆ. ರಮೋಲಾ ಈ ರಶ್ಮಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕನನ್ನು ಇಂಪ್ರೆಸ್ ಮಾಡುವ ಪ್ರಯತ್ನ ಮಾಡುವ ಪಾತ್ರವಾಗಿದೆ. ಆದರೆ ನಾಯಕ ಗೌತಮ್ ಸುಳ್ಳು ಹೇಳಿ ರಶ್ಮಿಕಾಳನ್ನು ಮನೆಗೆ ಕಳುಹಿಸಿದ್ದಾನೆ. ಇದನ್ನು ನೋಡಿ ಪ್ರೇಕ್ಷಕರಿಗೆ ಹೊಸ ಪ್ರಶ್ನೆ ಕಾಡಿದೆ.
ರಮೋಲಾ ಅವರ ರಶ್ಮಿಕಾ ಪಾತ್ರ ಕೇವಲ ಅತಿಥಿ ಪಾತ್ರವಾಗಿತ್ತಾ? ಎನ್ನುವುದು ಈಗ ಪ್ರೇಕ್ಷಕರ ಅನುಮಾನವಾಗಿದೆ. ಅಲ್ಲದೇ ಇನ್ನು ಈ ಪಾತ್ರ ಬರುವುದೋ ಇಲ್ಲವೋ ಎನ್ನುವ ಪ್ರಶ್ನೆ ಸಹಾ ಕೆಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಸದ್ಯಕ್ಕೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ತಮ್ಮ ಪ್ರಶ್ನೆಗಳಿಗೆ ಖಂಡಿತ ಉತ್ತರ ಸಿಗಬಹುದು ಎನ್ನುವ ನಿರೀಕ್ಷೆಗಳಿವೆ.
- ಸೀತಾ ರಾಮ ಸೀರಿಯಲ್ ಯಾವಾಗ ? ಬಹು ದಿನಗಳ ಈ ಪ್ರಶ್ನೆಗೆ ಉತ್ತರ ಕೊಡಲು ಸಜ್ಜಾಯ್ತು ಝೀ ಕನ್ನಡ
- ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ
- ಇನ್ನು ಬಂದಿಲ್ಲ ಪ್ರೊಮೋ: ಈ ವೀಕೆಂಡ್ ನಲ್ಲಿ ಸಾಧಕರ ಕುರ್ಚಿಯಲ್ಲಿ ಕೂರುವವರು ಯಾರು?
- ಪಾರು ಸೀರಿಯಲ್ ನಟಿಯ ಹೊಸ ಲುಕ್ ಗೆ ಹುಬ್ಬೇರಿಸಿದ ನೆಟ್ಟಿಗರು: ಸಿತಾರಾ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ