ಕಿರುತೆರೆಗೆ ಭರ್ಜರಿ ಕಮ್ ಬ್ಯಾಕ್ ಮಾಡಿದ 90ರ ದಶಕದ ಜನಪ್ರಿಯ ಬಾಲನಟಿ ಸಿಂಧೂ ರಾವ್

ಕನ್ನಡ ಸಿನಿಮಾ ರಂಗದ ದಿಗ್ಗಜ ನಟರಾದ ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಸ್ಟಾರ್ ಗಳ ಜೊತೆಯಲ್ಲಿ ಸಿನಿಮಾಗಳಲ್ಲಿ ನಟಿಸಿದ್ದ ಸಿಂಧು ರಾವ್ ಅವರು ಈಗ ಬಣ್ಣದ ಲೋಕಕ್ಕೆ ಮತ್ತೆ ಮರಳಿ ಬಂದಿದ್ದಾರೆ. ವಿದ್ಯಾಭ್ಯಾಸ, ಅನಂತರ ಮದುವೆ, ಸಂಸಾರ ಎಂದು ನಟನೆಯಿಂದ ಬ್ರೇಕ್ ಪಡೆದಿದ್ದ ಸಿಂಧು ಅವರು 90 ರ ದಶಕದಲ್ಲಿ ಬಹು ಬೇಡಿಕೆಯ ಬಾಲನಟಿಯಾಗಿ ಮಿಂಚಿದ್ದರು. ಈಗ ಸಿಂಧು ರಾವ್ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ನೀಡಿದ್ದಾರೆ.

ಸಿನಿಮಾ ರಂಗದಲ್ಲಿ ಬಾಲನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಕಲಾವಿದರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಇಂದು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಕೆಲವೊಬ್ಬರು ವರ್ಷಗಳ ನಂತರ ಮತ್ತೆ ಕಿರುತೆರೆ ಹಾಗೂ ಬೆಳ್ಳಿ ತೆರೆಗೆ ಮರಳಿ ಬರುತ್ತಿರುವುದು ಕೂಡಾ ನಡೆದಿದೆ. ಇದೀಗ ಸಿಂಧೂ ರಾವ್ ಅವರು ಸಹಾ ಮರಳಿ ನಟನೆಯ ಕಡೆಗೆ ವಾಪಸಾಗಿದ್ದಾರೆ.
ಡಾ. ವಿಷ್ಣುವರ್ಧನ್(Vishnuvardhan)  ಜೊತೆ ‘ನಾನೆಂದು ನಿಮ್ಮವನೇ’ ಸಿನಿಮಾ ಬಳಿಕ ಸಿಂಧು ರಾವ್ ನಟಿಸಿದ್ದರು.

ಅನಂತರ ರಾಯರು ಬಂದರು ಮಾವನ ಮನೆಗೆ, ಮದರ್ ಇಂಡಿಯಾ, ಆಯುಧ, ಮೌನರಾಗ, ಪುಟ್ಮಲ್ಲಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಸಿಂಧು ಅವರು ನಟಿಸಿದ್ದಾರೆ. ನಟಿಸಿದ್ದಾರೆ. ಅಲ್ಲದೇ ಅವರು ಮೌನರಾಗ ಸಿನಿಮಾದಲ್ಲಿ ಮನೋಜ್ಞ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ಪಡೆದ ಕಲಾವಿದೆಯಾಗಿದ್ದಾರೆ. ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟ ಸಿಂಧು ಅವರು ನಟನೆಯಿಂದ ದೂರ ಉಳಿದಿದ್ದರು. ಕೋವಿಡ್ ಸಮಯದಲ್ಲಿ ಒಂದೆರಡು ಪ್ರಾಜೆಕ್ಟ್ ಮಾಡಿ ಅನಂತರ ಸುಮ್ಮನಾಗಿದ್ದರು.

ಈಗ ಅವರು ವೈಷ್ಣವಿ ಗೌಡ ಮತ್ತು ಗಗನ್ ಜೋಡಿಯಾಗಿ ಮೂಡಿ ಬರುತ್ತಿರುವ ಜನಪ್ರಿಯ ಸೀರಿಯಲ್ ಸೀತಾ ರಾಮದಲ್ಲಿ ನಾಯಕನ ಚಿಕ್ಕಮ್ಮನ ಪಾತ್ರದ ಮೂಲಕ ಕಿರುತೆರೆಗೆ ಮರಳಿ ಬಂದಿದ್ದು, ಸಿಂದು ಅವರನ್ನು ಕಂಡು ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಸಿಂಧೂ ಅವರ ನಟನೆಯ ಈ ಜರ್ನಿಯಲ್ಲಿ ಅವರ ಪತಿ ಮಹೇಶ್ ಅವರು ತಮ್ಮ ಪತ್ನಿಯ ಬೆಂಬಲವಾಗಿ ನಿಂತಿದ್ದಾರೆ

Related posts

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

This website uses cookies to improve your experience. We'll assume you're ok with this, but you can opt-out if you wish. Read More